ಪ್ರವಾದಿ ಮುಹಮ್ಮದ್(ಸ)
ಮಾದರಿ ಶಿಕಕ
೦
ನಈಮ್ ಸಿದ್ದೀಕಿ
ಪರಮದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿಂದ
ಪ್ರಕಾಶಕರ ಮಾತು
ಪ್ರವಾದಿಗಳು ಒಂದು ಸಮಗ್ರ ನಾಗರಿಕ ಕ್ರಾಂತಿಯ ಹಾಗೂ ಶೈಕ್ಷಣಿಕ ಆಂದೋಲನದ
ವಾಹಕರಾಗಿರುತ್ತಾರೆ. ಪ್ರವಾದಿ ಮುಹಮ್ಮದ್(ಸ) ಅವರು ಸಂಪೂರ್ಣ ಜೀವನದಲ್ಲಿ
ಕ್ರಾಂತಿಯುಂಟು ಮಾಡಲಿಕ್ಕಾಗಿ ಸತ್ಯಧರ್ಮದೊಂದಿಗೆ ನಿಯುಕ್ತರಾದರು.
ವಿಶ್ವಾಪ-ವಿಚಾರಗಳಿಂದ ಹಿಡಿದು ರಾಷ್ಟ್ರ ನಿಯಮಗಳವರೆಗೆ ಪ್ರತಿ ಯೊಂದು ರಂಗವನ್ನೂ
ಪುನರ್‌ನಿರ್ಮಾಣ ಮಾಡುವ ಕಾರ್ಯ ಅವರ ಮುಂದಿತ್ತು, ಇಷ್ಟು ದೊಡ್ಡ ಕಾರ್ಯವನ್ನು
ನಿರ್ವಹಿಸಲಿಕ್ಕಾಗಿ ಪ್ರವಾದಿ(ಸ) ಮಾನವರ ಶಿಕ್ಷಕ ಮಾತ್ರವಾಗಿರದೆ ಸಮಗ್ರ ಶೈಕ್ಷಣಿಕ
ಆಂದೋಲನದ ಮಹಾ ನಾಯಕರೂ ಆಗಿದ್ದರು.
ಸತ್ಯಧರ್ಮದ ಶೈಕ್ಷಣಿಕ ಆಂದೋಲನದ ನಾಯಕರಾಗಿದ್ದ ಪ್ರವಾದಿ(ಸ) ಅವರ
ಮಟ್ಟಿಗೆ ಇಡೀ ಸಮಾಜವೇ ಕ್ಲಾಸ್‌ರೂಮ್ ಆಗಿತ್ತು. ಪ್ರವಾದಿ(ಸ) ವೈಚಾರಿಕ ವಾಗಿಯೂ
ಶಿಕ್ಷಣ ನೀಡುವವರಾಗಿದ್ದರು. ನೈತಿಕ ಮತ್ತು ಸಾಮಾಜಿಕ ನೆಲೆಯಲ್ಲೂ ಸುಧಾರಣಾ
ಕರ್ತವ್ಯವನ್ನು ನಿರ್ವಹಿಸುವವರಾಗಿದ್ದರು. ರಾಜಕೀಯ ಮತ್ತು ಆರ್ಥಿಕ ರಂಗಗಳಲ್ಲೂ
ಸನ್ಮಾರ್ಗ ತೋರುವವರಾಗಿದ್ದರು. ಪ್ರತಿರೋಧಿ ವಿಧ್ಧಂಸಕ ಶಕ್ತಿಗಳ ವಿರುದ್ಧ ಯುದ್ಧರಂಗ
ದಲ್ಲೂ ಮಾರ್ಗದರ್ಶನ ಮಾಡುವವರಾಗಿದ್ದರು.
ಪ್ರವಾದಿ(ಸ) ಅವರು ಶಿಕ್ಚಕರೆಂಬ ನೆಲೆಯಲ್ಲಿ ಮಾಡಿದ ಹಾಗೂ ಅನಂತರ ಶಿಕ್ಷಕರಿಗೆ
ಬಿಟ್ಟುಹೋದ ಸ್ಪಷ್ಟಮಾರ್ಗಸೂಚಿಗಳ ಒಂದು ಸಂಕ್ಷಿಪ್ತ ವಿವರಣೆ ಈ ಕೃತಿಯಲ್ಲಿದೆ.
ಪ್ರವಾದೀಸ) ಅವರ ಶಿಕ್ಷಣ ಕ್ರಮಕ್ಕೂ ಪ್ರಸ್ತುತ ಇಂದು ಜಾರಿಯಲ್ಲಿರುವ ಶಿಕ್ಷಣ
ಪದ್ಧತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮ್
ಸಮುದಾಯ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಶಿಕ್ಷಣ ಕ್ರಮಗಳ
ತುಲನಾತ್ಮಕ ಅಧ್ಯಯನಕ್ಕೆ ಈ ಕೃತಿ ಹೆಚ್ಚು ಸಹಾಯಕವಾಗಬಹುದು.
ಗ್ರಂಥಕರ್ತ ಮೌಲಾನಾ ನಈಮ್ ಸಿದ್ದೀಕಿಯವರು ಬಯಸುವಂತೆ ಈ ಕೃತಿಯು
ಪ್ರವಾದಿ(ಸ) ಅವರ ಶೈಕ್ಷಣಿಕ ಸಾಧನೆಗಳ ಬೆಳಕಿನಲ್ಲಿ ಮುಸ್ಲಿಮ್ ಸಮಾಜಕ್ಕೆ ಒಂದು
ಆರೋಗ್ಯವಂತ ಶಿಕ್ಷಣ ಪದ್ಧತಿಯನ್ನುಆವಿಷ್ಕರಿಸಲು ಪ್ರೇರಕವಾಗಲಿ ಎಂದು ಹಾರೈಸುತ್ತೇವೆ.
ಜಾ. ಶಾಂತಿ ಪ್ರಕಾಶನ
ಅನುಕ್ರಮಣಿಕೆ
ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ... 05
ನಮ್ಮ ಭಷ ಷಿ ಸಮಾ ಯಾ ತಾತಾ 07
ಪ್ರವಾದಿ(ಸ) ಶೈಕ್ಷಣಿಕ ಆಂದೋಲನದ ನಾಯಕ....................... 16
ಪ್ರವಾದಿಯವರ(ಸ) ಶಿಕ್ಷಕ ಸ್ಥಾನ ಮತ್ತು ಶಿಕ್ಷಣದ ಯುತ್ತಿ.......... 17
ಶಿಕ್ಷಣದ ಪ್ರಚಾರಕ್ಕಾಗಿ ಪ್ರವಾದಿಯವರ(ಸ) ಪ್ರಯತ್ನಗಳು............. 29.
ಕೊನೆಯ ಮಾತು. 34
ಪ್ರವಾದಿ ಮುಹಮ್ಮದ್(ಸ) ಮಾದರಿ ಶಿಕ್ಷಕ
ಪ್ರತಿಯೊಂದು ಸೃಷ್ಟಿಗೂ ಅದರ ವಿಧಿಯನ್ನು ನಿಶ್ಚಯಿಸಿ ಕೊಟ್ಟು ಅದಕ್ಕೆ ಕ
ಸಂಯಾದ ರ್ಯ ಮಾಡಿದ ಹಾಗೂ ಹ. ಆದಮ್‌ರಿಗೆ(ಅ) ವಸ್ತು
ಜ್ಞಾನವನ್ನು ದಯಪಾಲಿಸಿ ಅವರನ್ನು ಮಾನವರ ಪ್ರಪ್ರಥಮ ಗುರುವಾಗಿ ಮಾಡಿದ
ಸರ್ವಜ್ಞನೂ ಧೀಮಂತನೂ ಆದ ಅಲ್ಲಾಹನ ನಾಮದಿಂದ ಆರಂಭಿಸುತ್ತೇನೆ.
ಮಾನವರಿಗೆ ಎಚ್ಚರಿಕೆ ಹಾಗೂ ಸುವಾರ್ತೆ ನೀಡಲು ಮತ್ತು ನಿರ್ಣಾಯಕ
ದಿನದವರೆಗೂ ಮಾನವರ .ಮಾರ್ಗದರ್ಶನಕ್ಕಾಗಿ ಗುರುವಾಗಿ ನೇಮಿಸಲ್ಪಟ್ಟಿರುವ ಆ
ಮಹಾನ್ ಪ್ರವಾದಿ(ಸ) ಅವರ ಮೇಲೆ ಶಾಂತಿಯಿರಲಿ. ಅವರ ಶಿಕ್ಷಣವು ಸತ್ಯವಾಗಿದ್ದು
ಅತ್ಯಂತ ಪ್ರಭಾವಶಾಲಿಯಾಗಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಅವರ
ಶಿಕ್ಷಣದಿಂದಾಗಿ ಅರೇಬಿಯಾದ ಮರುಭೂಮಿಯ ಚಿಕ್ಕ ಕ್ಲಾಸ್‌ರೂಮ್‌ನಿಂದ
ನಾಗರಿಕತೆಯಂದರೇನೆಂದೇ ಅರಿಯದ ಒಂದು ಜನಾಂಗವು ಜಗತ್ತಿನಲ್ಲಿ ಸತ್ಯ, ನ್ಯಾಯ,
ಸಮಾನತೆ, ಬ್ರಾತೃತ್ವ ಪರೋಪಕಾರ ಹಾಗೂ ಶಾಂತಿಯ ಧ್ವಜ ಹಿಡಿದು ನಾಯಕತ್ವದ
ಪದವಿಗೇರಿತು. 'ಎಡ್ಡಾನ-ಕಲೆಗಳ ಮುಚ್ಚಿದ ಬಾಗಿಲುಗಳನ್ನು ತನ್ನ ವಿಚಾರ ಮತ್ತು
ಶೋಧನೆಗಳ ಮೂಲಕ ಸಕಲ ಮಾನವರಿಗಾಗಿ ತೆರದುಕೊಟ್ಟಿತು. ವಾಸ್ತವದಲ್ಲಿ
ಪ್ರವಾದಿ(ಸ) ಅವರಿಂದ ತಯಾರಿಸಲ್ಪಟ್ಟ ಈ ಜನರೇ ಮಾನವ ನಾಗರಿಕತೆಗೆ ನಾಂದಿ
ಹಾಕಿದರು. ಇಂದಿನ ದುಷ್ಟ ಶಿಕ್ಷಣ ಸಂಪ್ರದಾಯಗಳಲ್ಲೂ ಗೊಂದಲಮಯ
ಆಂದೋಲನಗಳಲ್ಲೂ ಎಲ್ಲಾದರೂ ಅಲ್ಪಸ್ವಲ್ಪ ಒಳಿತು ಕಂಡು "ಬರುತ್ತಿದೆ, ಅದು
ಪ್ರವಾದಿ ಮುಹಮ್ಮದ್(ಸ): ಅವರ ಈ ಸಮುದಾಯದ ಕೊಡುಗೆಯೇ ಆಗಿದೆ.
ಆದರೆ ಇತರರಿಗೆ ಮಾರ್ಗದರ್ಶನ ಮಾಡಿದ ಈ ಸಮುದಾಯ ಆ ಬಳಿಕ ತನ್ನನ್ನು
ತಾನೇ ಮರೆತಿರುವುದು ಎಂತಹ ವಿಷರ್ಯಾಸ।
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ |
ಚರ್ಚೆಯನ್ನು ಆರಂಭಿಸುವುದಕ್ಕೆ ಮುಂಚೆ ಒಂದು ವಿಷಯವನ್ನು ಅತ್ಯಂತ
ದುಃಖದಿಂದ ಹೇಳಬಯಸುತ್ತೇನೆ. ಇಸ್ಲಾಮಿ ಸಮುದಾಯವೆಂಬ ನೆಲೆಯಲ್ಲಿ ನಾವು
ನಮ್ಮ ಆಚಾರ-ವಿಚಾರಗಳ ಶ್ರೇಷ್ಠ ಗುರುವಾಗಿರುವ ಪ್ರವಾದಿ(ಸ) ಅವರ ಅನುಸರಣೆಯ
ಬೇಡಿಕೆಯನ್ನು ಪಾಲಿಸುತ್ತಿಲ್ಲ ನಾವು ನಮ್ಮ ಆಚಾರ-ವಿಜಾರಗಳಲ್ಲಿ ಪ್ರವಾದಿ(ಸ)
ಅವರನ್ನು ನಮ್ಮ ಮಾರ್ಗದರ್ಶಕನೆಂದು ಅಂಗೀಕರಿಸಬೇಕಿತ್ತು. ಇತಿಹಾಸದ ಏರಿಳಿತಗಳಲ್ಲಿ
ಅವರ ನಾಯಕತ್ವವನ್ನು ಒಪ್ಪಿಕೊಳ್ಳಬೇಕಿತ್ತು. ರಾಜಕೀಯ, ಆರ್ಥಿಕ, ಶೈಕ್ಟಣಿಕವೇ
ಮೊದಲಾದ ಜೀವನದ ಎಲ್ಲ ರಂಗಗಳಲ್ಲೂ; ಅವರನ್ನು ನಮ್ಮ ಗುರುವೆಂಬ ನೆಲೆಯಲ್ಲಿ
ದಾರಿದೀಪವಾಗಿ ಬಳಸಬೇಕಿತ್ತು. ಆದರೆ ಮಾನವ ಸಂಸ್ಕೃತಿಯ ಉತ್ಕೃಷ್ಟ
ನಾಯಕರಾಗಿರುವ ಅವರನ್ನು ಗೌರವಾತಿರೇಕದ ಹೆಸರಲ್ಲಿ ನಾವು ಪೌರೋಹಿತ್ಯದ
ಸ್ಥಾನದಲ್ಲಿ ಕುಳ್ಳಿರಿಸಿ, _ಆಜಾರ-ವಿಚಾರಗಳಲ್ಲಿ ನಮ್ಮ ಮಾರ್ಗದರ್ಶನಕ್ಕಾಗಿ ಆಧುನಿಕ
ಸಂಸ್ಕೃತಿಯ , ದುರ್ಮಾರ್ಗಿ ಹಾಗೂ ದುರಾಚಾರಿಗಳ ಬಾಗಿಲುಗಳನ್ನು ತಟ್ಟಿ ಭಿಕ್ಷೆ
ಬೇಡುತ್ತಿದ್ದೇವೆ,
ನಾವು ಇತಿಹಾಸ ಮತ್ತು ಜ್ಞಾನದ ದಿಗಂತದಲ್ಲಿ ಮೂಡುವ ಹೊಸ ಹೊಸ
'ಮುಳುಗುವ' ಹೊಳಪನ್ನು. ನೋಡಿ ಇದುವೇ ನನ್ನು ಗುರಿಯೆಂದು ಸಾರಿಬಿಡುತ್ತೇವೆ.
ಆದರೆ ಅದು ತನ್ನ ಹೊಳಪನ್ನು ಮಿಂಚುಹುಳದಂತೆ ಸ್ವಲ್ಪ ಹೊತ್ತಿನ ಮಟ್ಟಿಗೆ ಬೆಳಗಿಸಿ
ಮುಳುಗಿದಾಗ ಇನ್ನೊಂದನ್ನು "ಹುಡುಕಿ ಅದಕ್ಕೆ ಮಾರು ಹೋಗುತ್ತೇವೆ. ಪ್ರವಾದಿ(ಸ)
ಅವರ ಅಸ್ತಿತ್ವ ಚರತ ಅವರ ಶಿಕ್ಷಣಗಳು ನಮ್ಮ -ಮುಂದಿದ್ದರೂ ಕೂಡ ನಾವು
ಎಂತೆಂತಹ ಕುರುಡರನ್ನು ಮತ್ತು ಕುಂಟರನ್ನು ಅನುಸರಿಸುತ್ತಾ ಎಡವಿ ಬೀಳುತ್ತೇವೆ
ಎಂಬ ಪ್ರಜ್ಞೆಯೇ ನಮಗಿರುವುದಿಲ್ಲ |
“ಇನ್ನೊಂದು ವಿಷಯವನ್ನು ನನ್ನ: ಪೀಠಿಕೆಯಲ್ಲಿ ಹೇಳಬಯಸುತ್ತೇನೆ. ಯಾವುದೇ
ಸಮಾಜದಲ್ಲಿ. ಜ್ಞಾನದ ಮೇಲೆ "ತಲು ಕವಿದಾಗ, ಶಿಕ್ಷಣವು ದಾರಿತಪ್ಪಿ ನಡೆದಾಗ,
ವಿದ್ಯಾಲಯಗಳು ತಮ್ಮ ಉದ್ದೇಶವನ್ನು 'ಮರೆತಾಗ ಹಾಗೂ" ಅಧ್ಯಾಪಕನು ' ತನ್ನ
ಕರ್ತವ್ಯವನ್ನು ಮತ್ತು ತನ್ನ' ಪಾತ್ರವನ್ನು ಸರಿಯಾಗಿ ನಿರ್ವಹಿಸದಿದ್ದಾಗ, ಆ ಸಮಾಜವು
ದಯನೀಯವಾಗಿ ಪತನಗೊಳ್ಳುತ್ತದೆ. ಅಂಶಹ ಸಮಾಜದ. ರಾಜಕಾರಣವು
ಆರೋಗ್ಯಕರವಾಗಿರುವುದಿಲ್ಲ ಅಲ್ಲಿ ಪ್ರಜಾಸತ್ತೆಗೆ ಬೆಳವಣಿಗೆಯಿರುವುಧಿಲ್ಲ ಆರ್ಥಿಕ
ನ್ಯಾಯ ಅಲ್ಲಿ ಸಾಪ ಫನೆಗೊಳ್ಳುವುದಿಲ್ಲ `ಅಪರಾಧ ಕೃತ್ಯ ಗಳನ್ನು ತಡೆಗಟ್ಟುವಂತಹ ನೈತಿಕ
ಬಲ ಅಲ್ಲಿರುವುದಿಲ್ಲ ಮಾತ್ರವಲ್ಲ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಲಿಸ್ಕಾಗಿ
6° |
ರಕ್ಷಣಾ ಸಾಮರ್ಥ್ಯವನ್ನೂ ರಾಜತಾಂತ್ರಿಕ ಶಕ್ತಿಯನ್ನೂ ಪ್ರಚಾರ ಮಾಧ್ಯಮಗಳನ್ನೂ
ಸರಿಯಾಗಿ ಬಳಸುವ ರಾಷ್ಟ್ರೀಯ ಸ್ಪಂತಿಕೆಯೂ ಉಳಿದಿರುವುದಿಲ್ಲ. |
ಟಿಷರ ಗುಲಾಮಗಿರಿಯ ಕಾಲವಂತಿರಲಿ, ನಾವು ಸ್ಪತಂತ್ರವಾಗಿ ಸುಮಾರು
ದುಗ ಕಳೆದಿದ್ದರೂ ಶಿಕ್ಷಣ ಪದ್ಧತಿಯು ಮಂದ ಬೆಳಕಿನಲ್ಲಿ ಸಾಗಿರುವುದರಿಂದ
ನಮ್ಮ ಇಂದಿನ ಪತನ ಇನ್ನಷ್ಟು ಭೀಕರ ರೂಪ ತಾಳಿದೆ.
ನಾವು ವಿಶಾಲ ದೃಷ್ಟಿಯಿಂದ ಜಾಗತಿಕ ವಿದ್ಯಮಾನಗಳನ್ನು ನೋಡಿದರೆ
ವಿಜ್ಞಾನ- -ಕಲೆಗಳು, ಸಂಘ- -ಸಂಸ್ಕೆಗಳು, ಆರ್ಥಿಕ ಸ ಸಂಪನ್ಮೂಲಗಳು ಹಾಗೂ ಆಡಂಬರ
ದಲ್ಲಿ ಮಾನವನು ತುಂಬಾ ಪ್ರಗತಿ ಸಾಗಿಸಿದ್ದಾನಾದರೂ ಹಾಗ ಪತನ
ಗೊಂಡಿದ್ದಾನೆ. ಯುದ್ಧ-ಕ್ರಾಂತಿ, ಜನಾಂಗೀಯ-ವರ್ಗೀಯ ಸಂಘರ್ಷಗಳು ಹಾಗೂ
ವಿವಿಧ ವಿದ್ವೇಷಕಾರಿ ಸಿದ್ಧಾಂತಗಳ ಮತ್ತು ವಿನಾಶಕಾರಿ ನಹ ನಡುವೆ ಸಿಲುಕಿ
ಶಾಂತಿಯನ್ನು ಕಳಕೊಂಡಿರುವ ಅಸಹಾಯಕ ಮಾನವನು ಸಹಾನುಭೂತಿಯ ಒಂದು
ಮಾತು ಕೇಳಲೂ ಚಡಪಡಿಸುತ್ತಿದ್ದಾನೆ.
ಇಂದು ಜೀವನದ ಸುಧಾರಣೆಗಾಗಿ ದೇಶೀಯವಾಗಿಯೂ ಅಂತರಾಷ್ಟ್ರೀಯ
ವಾಗಿಯೂ ಅತ್ಯಂತ ಹೆಚ್ಚು ಗಮನಹರಿಸಬೇಕಾದ ರಂಗ ವಿದ್ಯಾ ಿಭ್ಯಾಸ ರಂಗವಾಗಿದೆ.
ಅಡರ ಸುಧಾರಣೆಯಲ್ಲಿ "ರಕ್ಷೆಯಿದೆ. ಅದನ್ನು ಸರಿಪಡಿಸಿ ನೈಜ ಉದ್ದೇಶಗಳಿಗಾಗಿ
ಬಳಸಿದರೆ' ಮಾತ್ರ ನೆಲ ಜಲಗಳಲ್ಲಿ ಕ್ಷೋಭೆಯಿಂದ ತತ್ತರಿಸುವ ಮಾನವ ಲೋಕಕ್ಕೆ
ನಾವು ನಮ್ಮ ನವಪೀಳಿಗೆಯ ಮೂಲಕ ಶಾಂತಿ ಮತ್ತು ನ್ಯಾಯದ ಮಾರ್ಗದರ್ಶನ
ಮಾಡಬಲ್ಲೆವು.
ನನ್ನ ಪ್ರಬಂಧದ" ಉದ್ದೇಶವು ಗುರುವೆಂಬ ನೆಲೆಯಲ್ಲಿ ಪ್ರವಾದಿ(ಸ ಅವರ
ಸ್ಥಾನವನ್ನು, ಮುಂದಿಟ್ಟು ನಮ್ಮ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಕೆಲವು ಉಪಯುಕ್ತ
ಮಾಹಿತಿಗಳನ್ನು ಪಡೆಯುವುದೇ ಅಗಿದೆ. ಈ ರಂಗದಲ್ಲಿ ಅವರ ಸಾಧನೆಗಳ ಬಗ್ಗೆ
ಚರ್ಚಸುವುದಕ್ಕಿಂತ ಮುಂಚೆ ಆ ಶಿಕ್ಷಣ ಮತ್ತು ಜ್ಞಾನದ ಯುಕ್ತಿಯೇನಾಗಿತ್ತೆಂಬುದನ್ನು
ಗಮನಿಸದಿದ್ದರೆ' ಚರ್ಚೆ ಅರ್ಥಹೀನವಾದೀತು.
ನಮ್ಸ ಜ್ಞಾನ
“ಾನನೆಂದರೇನು? ಅದರ ಉದ್ದೇಶವೇನು? ಮತ್ತು ಅದನ್ನು ಗಳಿಸುವ
ಮಾರ್ಗಗಳಾವುವು ಈ ಪ್ರಶ್ನೆಗಳನ್ನು ಹಾಕುತ್ತಾ ನಾವು ಪಾಶ್ಚಾತ್ಯರ Thiet of
Kಗಂw!edೀನ್ನು ನೋಡುವಾಗ ಪ್ರವಾದಿ(ಸ) ಅವರ Me eer ಮತ್ತು
ಪವಿತ್ರ ಕುರ್‌ಆನಿನ ವಾಹಕರೆಂಬ ನೆಲೆಯಲ್ಲಿ ಒಂದು ವಿಷಯವನ್ನು ಹೇಳಲು
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ |
ನಿರ್ಬಂಧಿತರಾಗುತ್ತೇವೆ. ಅದೇನೆಂದರೆ ಪ್ರಚಲಿತ: ತಪ್ಪು ವಿಚಾರದಿಂದಾಗಿ ಎಲ್ಲ ಜ್ಞಾನ
ಶಿಕ್ಷಣಗಳೂ ಕೆಟ್ಟು ಹೋಗಿವೆ. ಅವುಗಳಲ್ಲಿರುವ ಕೆಲವೊಂದು ಸತ್ಯಾಂಶಗಳು ತಪ್ಪು
ವಿಚಾರಗಳೊಂದಿಗೆ ಕಲಬೆರಕೆಗೊಂಡಿವೆ. ಇದರಿಂದಾಗಿ ಜೀವನವನ್ನು ಪೂರ್ಣವಾಗಿ
ಉತ್ತಮಪಡಿಸಲು ಸಾಧ್ಯವಾಗುತ್ತಿಲ್ಲ ಯಾವ ಶಿಕ್ಷಣ ವ್ಯವಸ್ಥೆಯು ಈ. ವಿಚಾರಗಳನ್ನು
ವರ್ಗಾಯಿಸುವ ಮಾಧ್ಯಮವಾಗಿದೆಯೋ ಅದು ನಮ್ಮಲ್ಲಿ ಓರ್ವ ಮುಸ್ಟಿಮನಂತಹ.
ವಿಶ್ವಾಸ-ಚಾರಿತ್ರ್ಯಗಳನ್ನು ತುಂಬಲು ಹಾಗೂ ಮಾನವೀಯತೆಯ ಪ್ರಸಕ್ತ ಪತನಕಾರೀ
ಇಳದ Ss ಅಸಮರ್ಥವಾಗಿದೆ.
ಶ್ವಾತ್ಯ್ಯ ವಿದ್ಯಾಭ್ಯಾಸ ಸಿದ್ಧಾಂತದ ಪ್ರಕಾರ ನಮ್ಮ ಇಂದ್ರಿಯಗಳ ಅನುಭವಕ್ಕೆ
ತ್ಯ ಜ| ನಮ್ಮ ವಿಚಾರಕ್ಕೆ ನಿಲುಕುವ ವಸ್ತುವೇ ಸತ್ಯ. ಅದರಾಚೆ ಎಷ್ಟು ದೂಡ್ಡ
ವಾಸ್ತವಿಕತೆಗಳಿದ್ದರೂ ಅವು ವರ್ಜ್ಯ. ನಾವು ಒಂದು ವಸ್ತುವನ್ನು ಒಮ್ಮೆ | ಫ್
ರೂಪದಲ್ಲಿ ನೋಡಿದರೆ ಆಗ ಯುತ ವಾಸ್ತವಿಕತೆಯೆನಿಸುತ್ತದೆ. "ಅದರೆ ಆ ಬಳಿಕೆ
ಹೊಸ ಸಂಶೋಧನೆಗಳು ಹಿಂದಿನ ವಾಸ್ತವಿಕತೆಗಳನ್ನು ತಿರುಚಿದಾಗ ವಾಸ್ತವಿಕತೆಯು
ಹೊಸ ರೂಪ ತಾಳಿ ಹಿಂದಿನದ್ದನ್ನು ರದ್ದುಗೊಳಿಸಿ "ಬಿಡುತ್ತದೆ. ಈ ದೃಷ್ಟಿಕೋನದ
ಪರಿಣಾಮವಾಗಿ ನಮ್ಮ ಜ್ಞಾನ ಭಂಡಾರವೂ ಪ್ರಭಾವಿತವಾಗಿದೆ. ನಮ್ಮ ವೈಯಕ್ತಿಕ
ಚಾರಿತ್ರ್ಯ ಹಾಗೂ ಸಾಮೂಹಿಕ ಸಂಸ್ಕೃತಿಯನ್ನು ಕಟ್ಟುವ ಮೂಲಕ ನಾವು ನಿಜವಾದ
ಕಟ್ಟಡವನ್ನು ಕಟ್ಟಿದ್ದೇವೆ; ಇನ್ನು ಹೆಚ್ಚಿನ ಅನುಭವ ಮತ್ತು ಸಂಶೋಧನೆಗಳ ಮೂಲಕ
ಅದನ್ನು ಸರಿಪಡಿಸಿದರಾಯಿತು ಎಂದು ಸಮಾಧಾನ ಪಡುವಂತಹ ದಿಟ್ಟತನ ನಮ್ಮಲ್ಲಿ
ಇಲ್ಲವಾಗಿದೆ. ಇಂದಿನ ವೈಜ್ಞಾನಿಕ ಕಲ್ಪನೆಗಳು ನಮ್ಮ ಜೀವೆನದ ನಿರ್ಮಾಣ "ಕಾರ್ಯದಲ್ಲಿ
ವಿಶ್ವಾಸಾರ್ಹವೆಂದು ಹೇಳ ಬಹುದಾದ ಬುನಾದಿಗಳನ್ನು ನೀಡಲು ಅಸಮರ್ಥವಾಗಿವೆ.
ಇಂದಿನ ಸಿದ್ಧಾಂತ, ಇಂದಿನ ಆಂದೋಲನ, : ಇಂದಿನ ಸಾಮಾಜಿಕೆ ವ್ಯವಸ್ಥೆ ಮತ್ತು
ಇಂದಿನ ಸಮಾಜಗಳು ಕಡಲ ದಡದಲ್ಲಿ ಮಕ್ಕಳು ನಿರ್ಮಿಸಿ 'ಒಜೆಯುವ. ಮರಳ
ದಿಣ್ಣೆಗಳಾಗಿವೆ. ಆ ಮಕ್ಕಳು ತಾವು ಕಟ್ಟಿದ ಮನೆಗಳು ಉತ್ತಮವೆಂದೂ ಇತರರು
ಮಾಡಿದೆ ಮರಳ ಮನೆಗಳು ಕೀಳ್ತರದ್ದೆಂದೂ ಹಂಗಿಸಿ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ.
ಈ ವಿಮರ್ಶಾತ್ಮಕ ಚರ್ಚೆಯನ್ನು ದೀರ್ಫಗೊಳಿಸುವ ಬದಲು ಪ್ರವಾದಿಣು
ಅವರು ಮುಂದಿಟ್ಟ ಯುಕ್ತಿ ಜ್ಞಾನದ . ಬಗ್ಗೆ ಹೇಳ ಬಯಸುತ್ತೇನೆ.
ಇಲ್ಲಿ ಜ್ಞಾನವೆಂದರೆ ಮಾನವನ "ಎವಿಧ ಅಗತ್ಯಗಳನ್ನು ಪೂರೈಸಲಿಕ್ಕಾಗಿ
ಸಂಪನ್ಮೂಲಗಳನ್ನು ಸೃಷ್ಟಿಸಿ ಬೆಳೆಸುವಂತಹ ಜ್ಞಾನದ ಬಗ್ಗೆ, ಚರ್ಚಿಸುವುದಲ್ಲ ಇಲ್ಲಿ
ಚರ್ಚಿಸಲಾಗುವ ಇಷಯವು 'ಮಾನವ ಸಂಬಂಧದ ವರ್ತನೆ ಹಾಗೂ ಸಾಂಸೃತಿಕ
8.
ಸಂಸ್ಥೆಗಳ ಉದ್ದೇಶಗಳನ್ನು ನಿರ್ಧರಿಸುವಂತಹ ಶಿಕ್ಷಣದ ಕುರಿತಾಗಿದೆ.
ಈ ನಿಟ್ಟಿನಲ್ಲಿ ಪ್ರವಾದಿಯ) ಅವರು ಮಾನವರ ಗುರು ಎಂಬ ನೆಲೆಯಲ್ಲಿ ನಮ್ಮ
ಮುಂದಿಟ್ಟಿರುವ ವಾಸ್ತವಿಕತೆಯೇನೆಂದರೆ ಜ್ಞಾನವು ಸರ್ವಸಂಪೂರ್ಣವಾಗಿ ದೇವನಿಗೆ
ಇದೆಯೆಂಬುದಾಗಿದೆ.` ಅವನೇ ವಿಶ್ವದ ರಹಸ್ಯಗಳನ್ನು ಬಲ್ಲವನು, ಪ್ರತ್ಯಕ್ಷ-ಪರೋಕ್ಷಗಳನ್ನು
ಅರಿಯುವವನು ಮತ್ತು ಭೂತ-ಭವಿಷ್ಯತ್ ಕಾಲಗಳನ್ನು ಅರಿಯುವವನೂ
ನೋಡುವವನೂ ಆಗಿರುವನು.
ಮಾನವನಿಗೆ ಲಭಿಸಿರುವ ಅಥವಾ ಲಭಿಸಲಿರುವ ಜ್ಞಾನವೆಲ್ಲವೂ ಅವನದೇ
ಕೊಡುಗೆಯಾಗಿದೆ. ಮಾನವನಿಗೆ ಲಭಿಸಿರುವ ಅಲ್ಪಸ್ವಲ್ಪ ಜ್ಞಾನಮೂಲಗಳೂ ಅವನಿಂದಲೇ
ಲಭಿಸಿದೆ. ಕೇಳುವ, ನೋಡುವ ಮತ್ತು ಆಲೋಚಿಸುವ ಶಕ್ತಿಗಳೆಲ್ಲವೂ ಅವನಿಂದಲೇ
ನೀಡಲ್ಲಟ್ಟವುಗಳಾಗಿವೆ.
ಮಾನವನಿಗೆ ನೀಡಲಾಗಿರುವ ಜ್ಞಾನದ ಬಗ್ಗೆ ಅದು ಮಾನವನು ಶತಮಾನಗಳಲ್ಲಿ
ಸಾಧಿಸಿದ ಅಭಿವೃದ್ಧಿಯ ಹಾಗೂ ಮುಂದೆ ನಡೆಯಲಿರುವ ಸಂಶೋಧನೆಗಳ
ಹೊರತಾಗಿಯೂ 'ಆತ್ಮಲ್ಪತಂದು ಸ್ಪಷ್ಟಪಡಿಸಲಾಗಿದೆ." ದೇವನ ಪೂರ್ಣ ಜ್ಞಾನವನ್ನು
ಮುಂದಿಟ್ಟು ಮಾನವನಿಗೆ ತನ್ನ ಅಲ್ಪಜ್ಞಾನದ ಅರಿವಾದಾಗ ಅನಿವಾರ್ಯವಾಗಿಯೂ
ಅವನಲ್ಲಿ 'ಜ್ಞಾನ ಗಳಿಕೆಯ “ಅಪೇಕ್ಷೆ ಉಂಟಾಗುವುದು. ಆ ಪೂರ್ಣ ಜ್ಞಾನದ
ಪ್ರವಾಹದಿಂದ ಪ್ರಯೋಜನ ಪಡೆಯಲಿಕ್ಕಾಗಿ ಅವನು ಎದ್ದು ನಿಲ್ಲುವನು ಮತ್ತು
ಪೂರ್ಣಜ್ಞಾನಿ ಹಾಗೂ ಅವನ ಕೈಕೆಳಗೆ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯ ಮಧ್ಯೆ
ಇರಲೇಬೇಕಾದ ಮಾರ್ಗವನ್ನು ಹುಡುಕತೊಡಗುವನು. ತನ್ನ ಅಲ್ಪ ಜ್ಞಾನದ ಪ್ರಜ್ಞೆಯು
ಮಾನವನನ್ನು ತನ್ನ ಅಲ್ಪ ಹಾಗೂ ಸಂದೇಹಾಸ್ಪದ ಜ್ಞಾನದ ಆಧಾರದಲ್ಲಿ ಹೊಸ ಹೊಸ
ವ್ಯವಸ್ಥೆಗಳ ಸುಮ್ ನಾಗರಿಕತೆಗಳ ಅವ್ಯಮಸ್ಯತ ಹಾಗೂ ಅಸಂತುಲಿತ ಕಟ್ಟಡಗಳನ್ನು
ನಿರ್ಮಿಸುವಂತೆ, ಅದಕ್ಕಾಗಿ ಮಾನವ. ಶಕ್ತಿಯನ್ನೂ ಅಸಂಖ್ಯಾತ ಜೀವಗಳನ್ನೂ
ಬಲಿಯರ್ಪಿಸಿ, ಕೊನೆಗೆ ಒಂದರ ಹಿಂದೆ ಒಂದರಂತೆ ಭಯಾನಕ ವಿನಾಶದೊಂದಿಗೆ
ಕುಸಿದು ಬೀಳುವಂತೆ ಮಾಡುವುದರಿಂದ ತಡೆಯುತ್ತದೆ. ಪ್ರವಾದೀಸ) ಅವರ ಯುಕ್ತಿ
ಜ್ಞಾನವು ಮಾನವನ ಜ್ಞಾನವು ಪ್ರಪಂಚದಲ್ಲಿ ದೇವತ್ವ ಮತ್ತು ಅಧಿಕಾರಶಾಹಿತ್ವದ ಪಾತ್ರ
1 ಪವಿತ್ರ ಕುರ್‌ಆನ್: ಅಲ್ ಮುಲ್ಕ್-26, ಫಾತಿರ್-38, ಅಲ್ ಅನ್‌ಅಮ್-3, 80,
ಅನ್ನೂರ್-31, ಅಲ್ ಬಕರಃ-55,
2 ಸೂರಃ ಅಲ್ ಅಲಕ್-5. 3) ಸೂರಃ ಅಲ್ ಮುಲ್ಕ್-22. 4) ಸೂರಃ ಬನೀ ಕ
ಪ್ರವಾದಿ ಮುಹಮ್ಮದ್ (ಸ): ಮಾದರಿ ಶಿಕ್ಷಕ |
ವಹಿಸಲು ಅಪರ್ಯಾಪ್ಪವೆಂದು ಅವನಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ,
ಮಾನವನು ದಾಸ ಮತ್ತು ಪ್ರತಿನಿಧಿಯಾಗಿದ್ದುಕೊಂಡು ಓರ್ವ ಪರಮಾಧಿಕಾರಿಯ
ಮಾರ್ಗದರ್ಶನದಂತೆ ಕೆಲಸ ಮಾಡಲು ಸೃಷ್ಟಿಸಲ್ಪಟ್ಟಿದ್ದಾನೆಂಬುದಕ್ಕೆ ಅವನಿಗೆ ನೀಡಲಾದ
ಅಲ್ಕಜ್ಞಾನವೇ ಸಾಕ್ಷಿಯಾಗಿದೆಯೆಂಬುದನ್ನೂ ತಿಳಿಸುತ್ತದೆ." ಮಾನವನಿಗೆ ಅಲ್ಲಜ್ಞಾನ
ದೊರಕಿರುವುದರಿಂದ ಅವನು ಇಂದ್ರಿಯಾನುಭವ ಹಾಗೂ ಚಿಂತನೆಗಳ ಮೂಲಕ ತನ್ನ
ಜ್ಞಾನವನ್ನು ಹೆಚ್ಚಿಸಲು ಮಾತ್ರವಲ್ಲ ಅದಕ್ಕಿಂತಲೂ ಮಿಗಿಲಾಗಿ ಜೀವನದ ನಿರ್ಮಾಣಕ್ಕಾಗಿ.
ಕೆಲವು ಭದ್ರ ಬುನಾದಿಗಳನ್ನು ನೀಡಬಲ್ಲಂತಹ ಯಾವುದಾದರೂ ಇತರ ಜ್ಞಾನ
ಮೂಲವನ್ನು ಹುಡುಕಲು ನಿರ್ಬಂಧಿತನಾಗಿದ್ದಾನೆ. ಒಟ್ಟಿನಲ್ಲಿ ಮಾನವನು ಎಲ್ಲೂ
ಅಂತ್ಯಗೊಳ್ಳದ ಜ್ಞಾನಮಾರ್ಗದ ಪ್ರಯಾಣಿಕನಾಗಿದ್ದಾನೆ. ಅದರಲ್ಲಿ ವಿಶ್ರಾಂತಿಯ
ಯಾವ ಹಂತವೂ ಬರುವುದಿಲ್ಲ ದ್ಯಟ್ಯನಭ/ ಫಗ ಪ್ರವಾದಿ(ಸ) ಅವರು ಕಲಿಸಿದ
ಪ್ರಾರ್ಥನೆಯು ಜ್ಞಾನ ಗಳಿಕೆಯ ದಾಹವನ್ನು ಸದಾ ಜೀವಂತವಾಗಿರಿಸಲಿಕ್ಕಾಗಿದೆ.*
'ಆದರೆ ಇತರ ಸಿದ್ಧಾಂತಗಳ ಬದಲಿಗೆ ಇಸ್ಲಾಮೂ ಯುಕ್ತಿಜ್ಞಾನವು ಜ್ಞಾನ
ದಾಹಿಯ ಮುಂದೆ ಕೆಲವು ಮಾರ್ಗಸೂಚಿಗಳಿರಬೇಕು, ದಾರಿ ವೆಚ್ಚಕ್ಕಾಗಿ
ಬುತ್ತಿಯಿರಬೇಕು ಹಾಗೂ ಕತ್ತಲಲ್ಲಿ ದಾರಿ ತೋರಿಸಲು ಅವನ ಬಳಿ ಬೆಳಕೂ
ಇರಬೇಕೆಂದು ಬಯಸುತ್ತದೆ. ಪ್ರವಾದಿ(ಸ) ನೀಡಿದ ಕುರ್‌ಆನಿನ ಜ್ಞಾನದ ಆಧಾರದಲ್ಲಿ
ಮೂರು ವಾಸ್ತವಿಕತೆಗಳಿವೆ. ಮಾನವನ ವೈಯಕ್ತಿಕ ಚಾರಿತ್ರ್ಯ ಹಾಗೂ ಸಾಮೂಹಿಕ
ವ್ಯವಸ್ಥೆಯ ಆರೋಗ್ಯವು ಅವುಗಳ ಸರಿಯಾದ ಪ್ರಜ್ಞೆಯನ್ನು ಅವಲಂಬಿಸಿದೆ.
ಅವುಗಳ ಪೈಕಿ ಪರಮ ವಾಸ್ತದಿಕತ(upೀn Reality)» ದೇವನ
ಅಸ್ತಿತ್ವವಾಗಿದೆ. ಇಲ್ಲಿ ನಾನು ದೇವನ ಇರುವಿಕೆಯ ಬಗ್ಗೆ ಪುರಾವೆಗಳನ್ನು ನೀಡ
ಹೊರಟಿಲ್ಲ ನಾನು ಹೇಳಬಯಸುವುದೇನೆಂದರೆ ದೇವನ ಕಲ್ಪನೆಯೇ ಇಸ್ಲಾಮೂ
ಯುಕ್ತಿಚ್ಞಾನದ ಮೂಲಾಧಾರವಾಗಿದೆ. ಅವನ ವ್ಯಕ್ತಿತ್ವ ಅವನ ಗುಣವಿಶೇಷತೆಗಳು
ಹಾಗೂ ಅವನ ಹಕ್ಕುಗಳ ಪ್ರಜ್ಞೆಯಿಂದಲೇ ಮಾನವನ ಜೀವನ ಯಶಸ್ಸು ಸಾಧ್ಯ.
ಎರಡನೆಯ ಡೊಡ್ಡ ವಾಸ್ತವಿಕತೆಯು ಮಾನವನೇ ಆಗಿದ್ದಾನೆ. ದೇವನ. ಸೃಷ್ಟಿಗಳ
ಪೈಕಿ ಮಾನವನಿಗೆ ವಿಶಿಷ್ಟ ಸ್ಥಾನ” ಪ್ರಾಪ್ತವಿದೆ.?: ಅವನ ನೈಜ ಸ್ಥಾನವು ದೇವನ
'ಇಬಾದತ್' (ಅರ್ಥಾತ್ ಅವನ ಆರಾಧನೆ ಮತ್ತು ಆಕುಸರಣ] ಮಾಡುವುದಾಗಿದೆ.
5) ಸೂರಃ ಅತ್ತೂರ್-56. 6 ಸೂರಃ ತಾಹಾ-114. "7 ಸೂರಃ ಅತ್ತೀನ್-4.
8) ಸೂರಃ ಅತ್ತೂರ್-56.
10 |
ಅವನು ಸರಿಯಾದ ಮಾರ್ಗದಲ್ಲಿ ನಡೆದರೆ ಅವನಿಗೆ ಖಲಾಫತ್ ಮತ್ತು ಪ್ರತಿನಿಧಿತ್ನದ
ಉನ್ನತ ಸ್ಥಾನವಿದೆ? ಅವನಿಗೆ ಬುದ್ಧಿಶಕ್ತಿ ಮತ್ತು ಜ್ಞಾನ ನೀಡುವುದರ ಜೊತಗ್ಗೆ ಒಳಿತು
ಕೆಡುಕುಗಳನ್ನು ಗುರುತಿಸುವ ಶಕ್ತಿಯನ್ನೂ ದಯಪಾಲಿಸಲಾಗಿದೆ..? ಅಷ್ಟೇ ಅಲ್ಲ
ಅವನು ಹೊಣೆಗಾರನೂ ಪ್ರಶ್ನಾರ್ಹನೂ "ಆಗಿದ್ದಾನೆ.
ಮರನೆಯ ದೊಡ್ಡ ವಾಸ್ತವಿಕತೆಯು ಈ ಭೌತಿಕ ಪ್ರಪಂಚವಾಗಿದೆ. ಹ
ಯಾವುದೋ ಅಜ್ಞಾತ ಕ್ರಿಯಗಳ ಮೂಲಕ ತನ್ನಷ್ಟಕ್ಕೆ ಉಂಟಾದುದಲ್ಲ ಇದು ಆಟ
ವಿನೋದದ ರೂಪದಲ್ಲೂ ಉಂಟಾದುದಲ್ಲ? ಇದು. ಉದ್ದೇಶರಹಿತವೂ ಪರಿಣಾಮ
ರಹಿತವೂ ಅಲ್ವ! ಅದಕ್ಕೆ ಒಂದು ಉದ್ದೇಶವಿದೆ." ಇದರಲ್ಲಿ ಸುವ್ಯವಸ್ಥೆ ಕಂಡು
ಬರುತ್ತದೆ. ಇದರಲ್ಲಿ ಪ್ರತಿಯೊಂದು ವಸ್ತುವೂ ಶಾಶ್ವತ ನಿಯಮಗಳಿಗೆ ಬದ್ಧವಾಗಿದೆ.
ಇದರಲ್ಲಿ ಸಮತೋಲನವಿದೆ.” ಇದರಲ್ಲಿ ಸೌಂದರ್ಯವಿದೆ.್ ಇಡೀ ಪ್ರಪಂಚವು
ಒಂದೇ ಘಟಕವಾಗಿದ್ದು ಒಂದೇ ಶಕ್ತಿಯ ಅಧೀನದಲ್ಲಿ ನಡೆಯುತ್ತಿದೆ ಈ
ಪ್ರಪಂಚದಲ್ಲಿರುವ ಮಾನವನಿಗೆ ಎಟಕುವ ಎಲ್ಲ ಭೌತಿಕ ವಸ್ತುಗಳೂ ಶಕ್ತಿಗಳೂ ಅವನ
ಪಾಲಿಗೆ "ಜೀವನಾಧಾರ'ವಾಗಿದೆ.” ಈ ವಸ್ತುಗಳಿಂದ ದೇವನ ಪ್ರತಿನಿಧಿಯೆಂಬ
ನೆಲೆಯಲ್ಲಿ ಪ್ರಯೋಜನ ಪಡೆಯಲು ಮತ್ತು ಅವುಗಳನ್ನು ದೇವನು ನಿಶ್ಚಯಿಸಿದ
ಮೇರೆಯೊಳಗಿದ್ದುಕೊಂಡು ಬಳಸಲು ಮಾನವನಿಗೆ _ಅಧಿಕಾರಎದೆ. ಪ್ರಪಂಚದಲ್ಲಿರುವ
ವಸ್ತುಗಳನ್ನೂ ಶಕ್ತಿಗಳನ್ನೂ ಉಪಯೋಗಿಸಲು ಅವುಗಳ ಬಗ್ಗೆ ಜ್ಞಾನ ಗಳಿಸಬೇಕಾದುದು
ಅತ್ಯಗತ್ಯ, ಇದರ ಜ್ಞಾನವನ್ನೇ ಪ್ರವಾದಿ(ಸ ಅವರು ಪದಾರ್ಥ ವಿಜ್ಞಾನ, ಭೌತಶಾಸ್ತ್ರ
ಎಂದಿದ್ದಾರೆ. ಅಂದರೆ ಪ್ರಪಂಚದ ವಸ್ತುಗಳ-ಹೆಸರಿಸಲ್ಪಟ್ಟ ಮತ್ತು ಹೆಸರಿಸಲ್ಪಡದ-ಮತ್ತು
ಅವುಗಳ ಪೈಕಿ ಉಪಯೋಗಗಳ ಬಗ್ಗೆ ಸಮಗ್ರ "ಹಾಗೂ ಸಂಪೂರ್ಣ ಮಾಹಿತಿ
ನೀಡುವಂತಹ ಜ್ಞಾನ.
ಈ ಮೂರು ವಾಸ್ತ ಸ್ವವಿಕತೆಗಳ ನಡುವೆ ಪ್ರಯಾಣಿಸುವ ಜ್ಞಾನದಾಹಿಗೆ
ವಾಸ್ತವಿಕತೆಗಳ ಎರಡು ದೊಡ್ಡರಂಗಗಳು ಎದುರಾಗುತ್ತವೆ. ಒಂದನೆಯದು ಭೌತಿಕ
9) ಸೂರಃ ಅನ್ನೂರ್-56. 10) ಸೊರಃ ಅಲ್ ಬಲದ್-10. 11) ಸೂರಃ ಅಶ್ವಕಾಸುರ್-8.
12) ಸೊರಃ ಅಲ್ ಅಂಬಿಯಾ-16. 13) ಸೂರೆಃ ಆಲಿ ಇಮ್ರಾನ್-191 14) ಸೂರಃ
ಅನ್ನಹ್ಟ್,-4. 15) ಸೂರಃ ಆಲ್‌ಮುಲ್ಕ್-3. 16) ಸೂರಃ ಅನ್ಸಹ್ಹ್.- 12, 17) ಸೂರಃ
ಅರ್ರಹ್ಮಾನ್-7. 18) ಸೂರಃ ಅಲ್‌ಕೆಹ್ಟ್1, ಸೊರಃ ಆಸ್ಪಾಪ್ಟಾಶ್-6, ಸೂರಃ ಅಲ್
ಹಿಜ್ರ್-16.' 19) ಸೂರಃ ಆಲ್ ಅಂಬಿಯಾ-22, ಸೂರಃ ಬನೀ ಇಸ್ರಾಕ್‌ಲ್, 20) ಸೂರಃ
ಆಲಿ ಇಮ್ರಾನ್-14, ಸೂರಃ ಅಲ್ ಬಕರಃ-36.
" ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 11:
ಹಾಗೂ ಇಂದ್ರಿಯುನುಭವಕ್ಕೆ ಬರುವ ರಂಗವಾದರೆ ಎರಡನೆಯದು ಪರೋಕ್ಷ
ವಿಷಯಗಳ ರಕಿಗ, ಪರೋಕ್ಷ ವಿಷಯಗಳೆಂದರೆ ಇಂದ್ರಿಯಾನುಭವಗಳಿಗೆ
ಅತೀತವಾಗಿದ್ದು ನೇರವಾಗಿ ಅವುಗಳನ್ನು ಗಳಿಸುವ ಯಾವ ಮಾರ್ಗವನ್ನೂ ನಮಗೆ
ನೀಡಲಾಗಿಲ್ಲ ಆದರೆ ಪರೋಕ್ಷ ವಿಷಯಗಳನ್ನು ಸಂಪೂರ್ಣ ಕಡೆಗಣಿಸಿಯೂ ನಾವು
ಜೀವಿಸುವಂತಿಲ್ವ ಪ್ರತಿಯೊಬ್ಬ ಮಾನವನ ಮುಂದೆಯೂ ಕೆಲವು ಮೂಲಭೂತ
ಪ್ರಶ್ನೆಗಳು ಬರುತ್ತವೆ. ಅವು ಹೀಗಿವೆ- ಈ ಪ್ರಪಂಚಕ್ಕೆ ಸೃಷ್ಟಿಕರ್ತ ಮತ್ತು ಒಡೆಯ
21) ಪರೋಕ್ಷ ವಿಷಯಗಳಲ್ಲಿ ಅನೇಕ ಎಧಗಳಿವೆ-
ಅ) ಭೂತ ಮತ್ತು ಭವಿಷ್ಯಗಳ ಪರಿಧಿಯಲ್ಲಿ ಬರುವ ಎಲ್ಲ ಅಜ್ಞಾತ ವಿಷಯಗಳು, ಶತಮಾನಗಳ
ಐತಿಹಾಸಿಕ ಘಟನೆಗಳಲ್ಲಿ ಕಂಡುಬರುವಂತಹ ದೂರಗಾವೂ ಪ್ರಭಾವ ಬೀರುವಂತೆಹ
ನಿಯಮಗಳು. ನೈತಿಕ ಮತ್ತು ನಾಗರಿಕ ಪರಂಪರೆಯಿಂದಾಗಿ ಸಾವಿರಾರು ಮಂದಿಯ ಮೂಲಕ
ಅನೇಕ ಪೀಳಿಗೆಗಳವರೆಗೆ ಸಾಗುವ ಅನಂತ ಹಾಗೂ ಅಸಾಮಾನ್ಯ ಪರಿಣಾಮಗಳು. ಕೆಲವೊಮ್ಮೆ
ಇದು ಜಾಗತಿಕ ಮಟ್ಟದಲ್ಲೂ ಹಬ್ಬಿರುತ್ತದೆ. ದೈವಿಕೆ ಶಿಕ್ಷಣ ಮತ್ತು ಮಾರ್ಗದರ್ಶನಗಳಲ್ಲಿ ಇಂತಹ
ವಾಸ್ತವಿಕತೆಗಳೂ ಒಳಗೊಂಡಿರುತ್ತದೆ.
`` ಅ) ಒಂದೇ ಸಮಯದಲ್ಲಿ ಕೆಲವರಿಗೆ ಪರೋಕ್ಷವೂ ಇನ್ನು ಕೆಲವರಿಗೆ ಪ್ರತ್ಯಕ್ಷವೂ ಆಗಿರುವಂತಹ
ವಿಷಯಗಳು. ಉದಾ: ನಮ್ಮೂರಿನಲ್ಲಿ ಕುಳಿತು ಇನ್ನೊಂದು ಊರಿನಲ್ಲಿ ಏನೆಲ್ಲ ನಡೆಯುತ್ತದೆ,
ಅಲ್ಲಿ ಯಾರೆಲ್ಲ ಇದ್ದಾರೆ ಅಥವಾ ಈ ಸಮಯದಲ್ಲಿ. ಎಲ್ಲೆಲ್ಲಿ ಮಳೆಯಾಗುತ್ತಿದೆ ಎಂಬುದನ್ನು
ನಾವು ತಿಳಿಯುವಂತಿಲ್ಲ ಅಥವಾ ಒಬ್ಬನು ರೈಲ್ವೆ ವೇಳಾ ಪಟ್ಟಿಯನ್ನು ನೋಡಿ ಯಾವುದಾದರೂ.
ರೈಲುಗಾಡಿಯು ಯಾವಾಗ ಎಲ್ಲಿಗೆ ತಲುಪುತ್ತದೆ ಮತ್ತು ಈಗ ಎಲ್ಲಿಂದ ಹಾದುಹೋಗುತ್ತದೆ
ಎಂದು ತಿಳಿದಿರುತ್ತಾನೆ. ಆದರೆ ಈ ಕುರಿತು ಅಸಂಖ್ಯ ಜನರಿಗೆ ತಿಳಿದಿರುವುದಿಲ್ಲ ಅಥವಾ ಒಂದು '
ವಿಶಿಷ್ಟ ಭಾಷೆ ಅಥವಾ ಕಲೆಯನ್ನು ಅಭ್ಯಸಿಸಿ ಒಬ್ಬರು ಅನೇಕ ವಿಷಯಗಳನ್ನು ತಿಳಿದಿರುತ್ತಾನೆ.
ಆದರೆ ಇತರರು: ಇದನ್ನು ತಿಳಿದಿರುವುದಿಲ್ಲ
ಇ) ಒಂದು ಕಾಲದ ಜನರ ಮಟ್ಟಿಗೆ ಪರೋಕ್ಷವೂ ಇನ್ನೊಂದು ಕಾಲದ ಜನರ ಮಟ್ಟಿಗೆ ಪ್ರತ್ಯಕ್ಷವೂ
ಆಗಿರುವಂತಹ ವಿಷಯಗಳು. ಉದಾ: ರೇಡಿಯೋ, ವಿದ್ಯುಚ್ಛಕ್ತಿ ಮತ್ತು ಅಣುಶಕ್ತಿ ಇತ್ಯಾದಿಗಳು
ಅಥವಾ ಚಂದ್ರನ ವಾಸ್ತವಿಕತೆಗಳ ಅನೇಕ ಮುಖಗಳ ಬಗ್ಗೆ ವಿಮಾನಗಳ ಉಪಯೋಗಕ್ಕಿಂತ
ಮೊದಲು ಮಾನವನು ತಿಳಿದಿರಲಿಲ್ಲ ಈ ಎಲ್ಲ ವಿಧಗಳು ಕಂಡು ಹಿಡಿಯ. ಬಲ್ಲಂತಹ
'ಪರೋಕ್ಷವೆನಿಸುತ್ತದೆ.
ಈ) ವಸ್ತುಗಳ ಹಾಗೂ ಘಟನೆಗಳ ಜ್ಞಾನವು ವ್ಯಾಪಕತೆಯ ಹೊರತಾಗಿಯೂ ನಾವು ನೇರವಾಗಿ
ತಿಳಿಯಲಾರದಂತಹ ವಿಷಯಗಳು. ಉದಾ: ದೇವನ ಅಸ್ತಿತ್ವ ದೇವವಾಣಿಯ ಅವತೀರ್ಣ
(ವಹೀ-ಇಲ್ದಾಮ್); ಮರಣೋತ್ತರ ಜೀವನ ಇತ್ಯಾದಿ. ಸಮ್ಮ ಚರ್ಚೆಯಲ್ಲಿ ಪರೋಕ್ಚ
ವಿಷಯಗಳನ್ನು ಈ ಅರ್ಥದಲ್ಲೇ ಪ್ರಯೋಗಿಸಿದ್ದೇವೆ. `
12
ಇದ್ದಾನೆಯೇ? ಈ ಜೀವಮಾನವೆಂಬುದು ತಾತ್ಕಾಲಿಕ ನೆಲೆಯೇ ಅಥವಾ ಅದು
ಮರಣಾ ನಂತರವೂ ಯಾವುದಾದರೊಂದು ರೂಪದಲ್ಲಿ ಮುಂದುವರಿಯುವುದೇ?
ನಮ್ಮ ಕರ್ಮಗಳಿಂದ ಇಲ್ಲಿ ನಾವು ಪಡೆಯುವ ಪ್ರತಿಫಲವು ಇಲ್ಲಿಗೇ ಮುಗಿಯುತ್ತದೆಯೇ
ಅಥವಾ ನ್ಯಾಯ ನೀತಿಗಳ ಶಾಶ್ಚತ ನಿಯಮಗಳ ಪ್ರಕಾರ ಆ ಕರ್ಮಗಳ ಸೂಕ್ತ
ಹಾಗೂ ಪರಿಪೂರ್ಣ ಪ್ರತಿಫಲ ಲಭಿಸಲಿದೆಯೇ? ಈ ಜೀವಮಾನದಲ್ಲಿ ಆರ್ಥಿಕ
ಮತ್ತು ಲೈಂಗಿಕ ವಿಜಯಕ್ಕಿಂತ ಮಿಗಿಲಾದ ಯಾವುದಾದರೂ ಉದ್ದೇಶವಿದೆಯೇ?
ಎಂಬೀ ಪ್ರಶ್ನೆಗಳಿಗೆ ಸರಿಯಾದ ಉತ್ತರ ನಿರ್ಣಯಿಸದೆ ಸಷ ಜೀವನವನ್ನು
ಸುಸೂತ್ರವಾಗಿ, ಸುಂದರವಾಗಿ ಮುಂದುವರಿಸುವಂತಿಲ್ಲ ಈ ಪ್ರಶ್ನೆಗಳಿಗೆ ಪ್ರತಿಯೊಬ್ಬ
ವ್ಯಕ್ತಿಯು ಸಕಾರಾತ್ಮಕವಾಗಿ ಅಥವಾ ನಕಾರಾತ್ಮಕವಾಗಿ, ಪೂರ್ಣಪ್ರಶ್ಞೆಯೊಂದಿಗೆ, "ಅರೆಬರೆ
ಪ್ರಜ್ಞೆಯೊಂದಿಗೆ, ಸರಿಯಾದ ಆಧಾರಸಹಿತೆ, ಇಲ್ಲವಾದರೆ ಅಂದಾಜು ಮತ್ತು
ಗುಮಾನಿಯೊಂದಿಗೆ ಉತ್ತರ ನಿರ್ಣಯಿಸುತ್ತಾನೆ. ಆ ಬಳಿಕ ಹುನಜ್ಯದ ಉತ್ತರದ
ಪ್ರಕಾರ ಅವನ ಜೀವನ ಸಾಗುತ್ತದೆ.
ಪ್ರಸ್ತುತ 'ಪರೋಕ್ಚ ವಿಷಯ'ಗಳ ಬಗ್ಗೆ ದೇವ ಪ್ರವಾದಿಗಳು ವಹೀ ಮತ್ತು:
ಇಲ್ಲಾಮ್‌ಗಳ ಮೂಲಕ ಗಳಿಸಿದ ಜ್ಞಾನವನ್ನು ನಮ್ಮ ಮುಂದಿಟ್ಟು ಪ್ರಪಂಚ ಮತ್ತು
ಇತಿಹಾಸದ ಆಧಾರಗಳ ಮೂಲಕ, ದೈವಿಕ ಮಾರ್ಗದರ್ಶನವನ್ನು rhs ಮತ್ತು
ಅದನ್ನು ಅಂಗೀಕರಿಸುವ ಜನರು ಮಾತ್ರ ಜಯ ಗಳಿಸುತ್ತಾರೆ 'ಮಭುವುದನ್ನು
ಸಾಬೀತುಪಡಿಸುತ್ತಾರೆ.
ಈ ನಿಟ್ಟಿನಲ್ಲಿ ಇಸ್ಲಾಮ ಜ್ಞಾನದ ಯುಕ್ತಿಯು ನಮ್ಮ ಗಮನವನ್ನು
ಕೇಂದ್ರೀಕರಿಸುವ ವಸ್ತು ಸುನ್ನತುಲ್ಲಾಹ್ ಮತ್ತು ಅಮ್ರುಲ್ಲಾಹ್* (ಅಲ್ಲಾಹನ ಶಾಶ್ವತ
ವಿಧಾನ ಮತ್ತು ಅಲ್ಲಾಹನ ತೀರ್ಮಾನ) ಆಗಿದೆಯೆಂದು ಸ್ಪಷ್ಟಪಡಿಸುವುದೂ
ಉಪಯುಕ್ತವೆನಿಸುತ್ತದೆ. ಈ ಎರಡು ವಿಷಯಗಳಡಿಯಲ್ಲಿ ಬರುವ ನಿಯಮಗಳ ಪೈಕಿ
ಸಮಗ್ರ, ಶಾಶ್ವತ ಮತ್ತು' ಭದ್ರವಾದವುಗಳನ್ನು ಪವಿತ್ರ ಕುರ್‌ಆನ್ ಉದಾಹರಣೆಗಳ
ಸಹಿತ ಸ್ಪಷ್ಟಪಡಿಸಿದೆ. ಇತಿಹಾಸದ ಸರಿಯಾದ `ಅಧ್ಯಯನ ಮಾಡಿ "ಹೆಚ್ಚಿ
ಸಾಕ್ಟಾ ಶ್ಚ್ಯಧಾರಗಳನ್ನು ಕಂಡು ಹಿಡಿಯಬಹುದಾಗಿದೆ.
ಅದೇ ರೀತಿಯಲ್ಲಿ ಪ್ರಪಂಚದ ಅಧ್ಯಯನದ ಕುರಿತು ಕುರ್‌ಆನ್ ಪ್ರಯೋಗಿಸುವ
ಒಂದು ಪಾರಿಭಾಷಿಕ ಶಬ್ದವು 'ಆಯತ್' ಎಂದಾಗಿದ್ದು ಅದು ಅತ್ಯಂತ ಮಹತ್ವದ್ದಾಗಿದೆ.
22) ಸೂರಃ ಬನೀ ಇಸ್ರಾಈಲ್-77.
23) ಸೂರಃ ಅಲ್ ಅನ್ಸಾಲ್-44, ಸೂರಃ ಹೂದ್-16, ಸೂರಃ ಅಲ್ ಅಹ್‌ರಾಬ್-: 38.
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 13
ಕುರ್‌ಆನಿನ ಆಯತ್‌ಗಳು(ಸೂಕ್ತಗಳು) ವಾಸ್ತವಿಕತೆಗಳ ಮತ್ತು ಘಟನೆಗಳ ಜ್ಞಾನವನ್ನು
ಗಳಿಸಲು ನಮಗೆ ಹೇಗೆ ಮಾರ್ಗದರ್ಶಿಯೋ ಅದೇ ರೀತಿಯಲ್ಲಿ ಭೌತಿಕ ಜಗತ್ತಿನಲ್ಲಿರುವ
ಎಲ್ಲ ಪ್ರತ್ಯಕ್ಷ ಪದಾರ್ಥಗಳೂ ಸತ್ಯಾನ್ವೇಷಣೆಯ ಪ್ರಮಾಣದಲ್ಲಿ ನಮಗೆ
ಮಾರ್ಗಸೂಚಿಗಳಾಗಿವೆ. ಈ ಮಾರ್ಗ ಸೂಚಿ ಗಳಿಗೂ ಆಯತ್(ದೃಷ್ಟಾಂತ) ಎಂಬ
ಪದ ಬಳಸಲಾಗಿದೆ. ಪ್ರಪಂಚದ ಆಯತ್‌ಗಳಿಂದ ಓರ್ವ ತತ್ಚಜ್ಞಾಧಿಯೂ ಓರ್ವ
ವಿಜ್ಞಾನಿಯೂ ಒಂದೇ ರೀತಿಯಲ್ಲಿ ಪ್ರಯೋಜನ ಪಡೆಯಬಲ್ಲರು. ಅಷ್ಟೇ ಅಲ್ಲ ಈ
ಆಯತ್‌ಗಳಲ್ಲಿ ಕಂಡುಬರುವ ಸೌಂದರ್ಯದಿಂದ ಸಾಹಿತಿಗಳು, ಕವಿಗಳು, ಚಿತ್ರಕಾರರು”
ಹಾಗೂ ಇತರ ಎಲ್ಲ ಬಗೆಯ ಕಲೆಗಾರರು ಪ್ರಯೋಜನ ಪಡೆಯಬಲ್ಲರು.
ಇಲ್ಲಿ ಒಂದು `ವಿಷಯವನ್ನು ಗಮನಿಸಬೇಕು. ಪ್ರಪಂಚದ ದೃಷ್ಟಾಂತಗಳು ಮತ್ತು
ಇತಿಹಾಸದಲ್ಲಿ ಕಾರ್ಯವೆಸಗುತ್ತಿರುವ ನಿಯಮಗಳು ದೈವಿಕ ಶಿಕ್ಷಣದ
ಆಯತ್‌ಗಳೊಂದಿಗೆ ಸರಿ ಹೊಂದುತ್ತವೆ. ಈ ಏಕರೂಪತೆಯು ದೈವಿಕ ಶಿಕ್ಷಣವು ಸತ್ಯ
ಹಾಗೂ ನೈಜವಾದುದು ಎಂಬುದಕ್ಕೆ ಒಂದು ಪ್ರಭಾವಕಾರಿ ಬೌದ್ಧಿಕ ಆಧಾರವಾಗಿದೆ.
ಈ ದೈವಿಕ ಜ್ಞಾನಮೂಲದಿಂದಾಗಿ, ನಮ್ಮ ಇಂದ್ರಿಯಾನುಭವದ ಹಾಗೂ
ಭಾವನೆಗಳ ಮೂಲಕ ಗಳಿಸುವ ಜ್ಞಾನದ ಕೊರತೆಯು ನೀಗುತ್ತದೆ. ನಮ್ಹ ನಂಬಿಕೆ
ಧೃಡವಾಗುತ್ತದೆ. ಅದರ ಮೂಲಕ ನಮ್ಮ ವ್ಯಕ್ತಿ ಚಾರಿತ್ರ್ಯ ಮತ್ತು ಸಮೂಹ
ನಾಗರಿಕತೆಯ ಆಸ್ತಿವಾರವನ್ನು ಹಾಕಬಹುದಾಗಿದೆ. ಗಣಿತದಲ್ಲಿ 2.254 ಎಂಬ
ಸೂತ್ರದಂತೆ ಈ ಧೃಢತೆಯು ನಾಗರಿಕ ವ್ಯವಸ್ಥೆಯ ಅಗತ್ಯವನ್ನು ಪೂರೈಸುತ್ತದೆ.
ಪ್ರವಾದಿಶ್ಚವು ನಮಗೆ ಕೆಲವು ವಿವರವಾದ ನಿಯಮ-ನಿರ್ದೇಶಗಳನ್ನು ಮೇರೆ
ಮತ್ತು ಸಂಕೇತಗಳನ್ನೂ ನೀಡುವುದರ ಜೊತೆಗೆ ಅದರ ಅತಿದೊಡ್ಡ ಉಪಕಾರವೆಂದರೆ
ಅದು ನಮಗೆ .'ಅಲ್ ಇಲ್ಲ್ (The Knowl) ಅಥವಾ 'ಮೂಲಭೂತ ಜ್ಞಾನ
(Basic Knowledge) ನೀಡುತ್ತದೆ. ಅದರ ಮೂಲಕ ನಮಗೆ ಕೇಂದ್ರೀಯ ಮಹಾ
ವಾಸ್ತವಿಕತೆ (Great en 80%॥0)ಯ ಪ್ರಜ್ಞೆ ದೊರೆಯುತ್ತದೆ. ಅದರ
ಮೂಲಕ ನಮಗೆ ಜೀವನದ ಮಾರ್ಗ ನಿರ್ದೇಶಕ ತತ್ವಗಳು (Guiding Principles)
ಮತ್ತು ಮೂಲಭೂತ “ಸತ್ಯ (Basic Realities) ಹಾಗೂ ಶಾಶ್ವತ ನೈತಿಕ ಮೌಲ್ಯ
(Permanent Moral Value)ಗಳಂತಪ ಅಮೂಲ್ಯ ಸಂಪತ್ತು ಕೈ ಸೇರುತ್ತದೆ.
ಇಂತಹ ಶಾಶ್ವತ ನಂಬಿಕೆಗಳನ್ನು ಪವಿತ್ರ ಕುರ್‌ಆನ್ 'ಕೌಲ್ ಸಾಬಿತ್'* (ಧೃಡ ಮಾತು)
24) ಸೂರಃ ಯೂಸುಘ್-105, ಸೂರಃ ಅನ್ನಹ್ಹ್-12, ಸೂರಃ ಆಲಿ ಇಮ್ರಾನ್-13,
ಸೂರಃ ಯೂನುಸ್-92, 25) ಸೂರಃ ಇಬ್ರಾಹೀಮ್-27.
14 |
1
ಎಂದು ಕರೆಯುತ್ತದೆ. ಇದು ಚಾರಿತ್ರ್ಯ ಮತ್ತು ಸಂಸ್ಕೃತಿಯನ್ನು. ತನ್ನ ಸ್ಥಾನದಲ್ಲೇ
ಸ್ಥಿರವಾಗಿರಿಸುತ್ತದೆ. ಈ ಮೂಲಭೂತ ವಾಸವಿಕತೆಗಳ ಹಾಗೂ ನಿಯಮಗಳ ಅಡಿಯಲ್ಲಿ
ಇನ್ನಿತರ ವಿವರವಾದ ನಿಯಮಗಳು ಹೊರಡುತ್ತವೆ.
ಇದೇ ಜ್ಞಾನವನ್ನು 'ವರಸತುಲ್ ಅಂಬಿಯಾ' (ಪ್ರವಾದಿಗಳ ವಾರೀಸು) ಎಂದು
ಹೇಳಲಾಗಿದೆ. ಇದರ ಕುರಿತೇ ಪ್ರವಾದಿ(ಸ) ಆ ಅದರ, ಗಳಿಕೆಯು ಪ್ರತಿಯೊಬ್ಬ
ಮುಸ್ಲಿಮನ ಮೇಲೆ ಕಡ್ಡಾಯವೆಂದಿರು ಇಲ್ಲಿ ಜ್ಞಾನವೆಂದರೆ ಎಲ್ಲ ರೀತಿಯ
ಜ್ಞಾನವೆಂಾಗಿರುತ್ತಿದ್ದರೆ ಪ್ರತಿಯೊಬ್ಬ ಮುಸ್ಸಿಮನೂ ಹತ್ತಿ ಹಿಂಜುವ ಮತ್ತು ಚರ್ಮ
ಹದಗೊಳಿಸುವಲ್ಲಿಂದ' ಹಿಡಿದು, ತಾಂತ್ರಿಕ, ವೈದ್ಯಕೀಯ, ಅಣುಶಕ್ತಿಯ ಹಾಗೂ ಅಂತರಿಕ್ಷ
ಯಾನದಂತಹ ಎಲ್ಲ ಜ್ಞಾನಗಳನ್ನೂ ಕರಗತ, ಮಾಡಿಕೊಳ್ಳುವುದು ಕಡ್ವಾಯವಾಗುತ್ತಿತ್ತು.
ಹಾಗೆ ಗಳಿಸದಿದ್ದರೆ ಕಡ್ಡಾಯ ` ಕರ್ತವ್ಯವನ್ನು ತೊರೆದಂತಹ "ಶಿಕ್ಷಾರ್ಹ ಅಪರಾಧಿಯೆಂದು
ಪರಿಗಣಿಸಲ್ಪಡುತ್ತಿದ್ದವು. ಮಸ್ತವದಲ್ಲಿ ಪವಿತ್ರ `ಕುರ್‌ಆನ್ ಸಂಪೂರ್ಣವಾಗಿ ಇದೇ
'ಅಲ್ ಇಲ್ಫ್(ಪರಮಜ್ಗಾನುಅನ್ನು ಪ್ರತಿಪಾದಿಸುತ್ತದೆ. ಪ್ರವಾದಿ(ಸ) ಅವರು ಗ್ರಂಥದ
ಮತ್ತು ಯುಕ್ತಿಯ ಶಿಕ್ಷಕನೆಂಬ' ನೆಲೆಯಲ್ಲಿ; ಇದೇ ಪರಮ ಜ್ಞಾನವನ್ನು ಪ್ರಚಾರ
ಮಾಡಲು ತಮ್ಮ ಶಕ್ತಿಯನ್ನು ` ಉಪಯೋಗಿಸಿದರು. ಇದನ್ನು ಅವರು ಅಲ್ಲಾಹನ
ಸಂಪ್ರೀತಿ ಗಳಿಸಿಕೊಡುವಂತಹ. "ಜ್ಞಾನವೆಂದು ವರ್ಣಿಸಿದ್ದಾರೆ.
ದ ಪರಮ" ಉದ್ದೇಶ ಯಾವುದು? ಪವಿತ್ರ ಕುರ್‌ಆನ್ ಪಾರಿಭಾಷಿಕದ
ಪ್ರಕಾರ ಇದರ ಉತ್ತರ 'ಹೀಗೆ ನೀಡಬಹುದು- ಸತ್ಯಜ್ಞಾನದ ಮೂಲಕ ಸೆತ್ಯರ್ಮದ
ಗಳಿಕೆ, ಸತ್ಯರ್ಮಗಳ 'ಮೂಲಕ ಶುದ್ಧ ಜೀವನದ ನಿರ್ಮಾಣ ಮತ್ತು ಶುದ್ಧ ಜೀವನದ
ಮೂಲಕ `ಸಂತೃಪ್ತ ಜೀವನವೆಂಬ ಉನ್ನತ ಸ್ಥಾನಕ್ಕೆ ತಲಪುದೇ ಜ್ಞಾನದ ಉದ್ದೇಶ.
ಇನ್ನಷ್ಟು "ವರಿಸಿ ಹೇಳಬೇಕಾದರೆ ಜ್ಞಾನದ ಕೆಲಸವು ಸರಿ-ತಪ್ಪು, ಸತ್ಯ-ಆಸತ್ಯ,
ಉಪಯುಕ್ತ“ “ಹಾನಿಕರ ಮತ್ತು 'ಒಳಿತು- ಕೆಡುಕುಗಳನ್ನು ಬೇರ್ಪಡಿಸಿ ನಮ್ಮ
ಮುಂದಿಡುವುದಾಗಿದೆ. ಪ್ರವಾದಿ ಶಿಕ್ಷಣದ" ಪರಮ ಸುರಿಯು ಸನ್ಮಾರ್ಗ-
ದುರ್ಮಾರ್ಗಗಳ ವ್ಯತ್ಯಾಸ ಸವನ್ನು ವ್ಯಕ್ತಗೊಳಿಸುವುದಾಗಿದೆ. 31 ಪ್ರವಾದಿಯ ಶಿಕ್ಷಣವು
ಸಾನಸಿದೆ ಮಾನದಂಡವಾಗರಚೇಕಾದುದು ಕಡ್ಡಾಯ. A £
ಇಸ್ಲಾಮೂ ಯುಕ್ತಿ ಜ್ಞಾನದ ವಿವರಗಳನ್ನು 'ಸಂಕ್ಷೇಪಿಸಲು ಬೇರೆಯೇ ಒಂದು
ಪ್ರಬಂಧ ಬೇಕಾದೇತು. ಇಲ್ಲಿ ಕೆಲವು ಅಂಶಗಳನ್ನು ಸೂಚಿಸುವುದು ಸೂಕ್ತವೆನಿಸುತ್ತದೆ.
26) ಮಿಶ್ಯಾತ್: “ಕಿತಾಬುಲ್ ಇಲ್ಮ್ - ಅಬೂಹುರೈರಾರಿಂದ ಉಲ್ಲೇಖತೆ. |
27) ಸೂರಃ ಅಲ್ ಬಕೆರಃ-256. 2೪) ಸೂರಃ ಅಲ್ ಬಕರಃ-185.
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 15
ಆದರೆ ಒಂದು ತಪ್ಪು ಗ್ರಹಿಕೆಯನ್ನು ನೀಗಿಸಬೇಕಾದುದು ಅಗತ್ಯ. ಅದೇನೆಂದರೆ 'ಅಲ್
ಇಲ್ಫ್‌ನ ಪ್ರಸ್ತುತ ಮಹತ್ವದ ಅರ್ಥ ಮಾನವನ ಜೀವನದ ಅನೇಕ ಅವಶ್ಯಕತೆಗಳನ್ನು
ಪೂರೈಸುವಂತಹ ಇತರ ಭೌತಿಕ ಮತ್ತು ಬೌದ್ಧಿಕ ಜ್ಞಾನಗಳನ್ನು ಕೈಬಿಡಬೇಕೆಂದು ಖಂಡಿತ
ಅಲ್ಲ
ಇಲ್ಲಿ ಪರಿಗಣಿಸಬೇಕಾದ ವಿಷಯವೇನೆಂದರೆ ನಾವು ನಮ್ಮ ಎಲ್ಲ ಶಿಕ್ಷಣವನ್ನು
'ಅಲ್ ಇಲ್ಫ್‌ನ ಆಧಾರದಲ್ಲಿ ಕ್ರೋಡೀಕರಿಸಬೇಕು. ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು
ಪಠ್ಯಗಳು ಇದನ್ನೇ ಅವಲಂಬಿಸಿರಬೇಕು. ಶೃಕ್ಚಣಿಕ ಕ್ರಾಂತಿಯ ಪ್ರಥಮ ಅಂಶ ಇದುವೇ
ಆಗಿದೆ. ಇದನ್ನು ಶಿಕ್ಷಣ ರಂಗದ ವಾಹಕರು ಈವರೆಗೂ ಗ್ರಹಿಸಿಲ್ಲ, ನಾವು ಪ್ರತಿಕೂಲ
ಹಾಗೂ ಗುರಿ "ತಪ್ಪಿದ ಶಿಕ್ಷಣ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಿಲುಕಿ ಕೊಂಡಿದ್ದೇವೆ.
ಪ್ರವಾದಿ(ಸ) ಶೈಕ್ಷಣಿಕ ಆಂದೋಲನದ ನಾಯಕ
ds ಸು ಸಮಗ್ರ ನಾಗರಿಕ ಕ್ರಾಂತಿಯ ಹಾಗೂ ಶೈಕ್ಟಣಿಕ
ಆಂದೋಲನದ ವಾಹ ಹಕರಾಗಿರುತ್ತಾರೆ. ಪ್ರವಾದಿ ಮುಹಮ್ಮದ್(ಸ) ಅವರು ಸಂಪೂರ್ಣ
ಜೀವನದಲ್ಲಿ ಕ್ರಾಂತಿಯುಂಟು ಮಾಡರಿಕ್ಕಗಿ ಸತ್ಯ ಧರ್ಮದೊಂದಿಗೆ ನಿಯುಕ್ತರಾದರು.
ವಿಶ್ವಾಸ-ವಿಚಾರಗಳಿಂದ ಹಿಡಿದು ರಾಷ್ಟ್ರ ನಿಯಮಗಳವರೆಗೆ ಪ್ರತಿಯೊಂದು ರಂಗವನ್ನೂ
ಪುನರ್ ನಿರ್ಮಾಣ ಮಾಡುವ ಕಾರ್ಯ ಅವರ ಮುಂದಿತ್ತು. ಇಷ್ಟು ದೊಡ್ಡ
ಕಾರ್ಯವನ್ನು ನಿರ್ವಹಿಸಲಿಕ್ಕಾಗಿ ಪ್ರವಾದಿಸು ಮಾನವರ ಶಿಕ್ಷಕ ಮಾತ್ರವಾಗಿರದೆ
ಸಮಗ್ರ ಶೈಕ್ಷಣಿಕ ಆಂದೋಲನದ ಮಹಾ ನಾಯಕರೂ ಆಗಿದ್ದರು.
ಇಸ್ಲಾಮ್ ಒಂದು ಸನ್ಮಾರ್ಗದರ್ಶಕ ಧರ್ಮವಾಗಿರುವಂತೆಯೇ ಅದೊಂದು ಜ್ಞಾನವೂ
ವಿದ್ಯೆ ಕಲಿಸುವ ಧರ್ಮವೂ ಆಗಿದೆ. ಯಾವ ಧರ್ಮವು 'ಇಕ್‌ರಆ್' (ಓದು) ಎಂಬ
ಆದೇಶದೊಂದಿಗೆ ಪ್ರಾರಂಭವಾಗುತ್ತದೋ ಯಾವುದರ ಅಭಿಸಂಬೋಧಿತರು 'ಉಲುಲ್
ಅಲ್ಟಾಬ್** (ಬುದ್ಧಿವಂತರು) ಆಗಿರುವರೋ ಯಾವ ಧರ್ಮದ ತಿರುಳನ್ನು ಅರಿತು
ವಿಶ್ವಾಸದ ಉನ್ನತ ಮಟ್ಟವನ್ನು ತಲುಪುವವರು 'ಅರ್ರಾಸಿಖೂನ ಫಿಲ್ ಇಲ್ಲ್ (ಜ್ಞಾನದಲ್ಲಿ
ಸುದೃಢವಾಗಿರುವವರು) ಎಂದು ಕರೆಯಲ್ಲಡುವರೋ ಯಾವ ಧರ್ಮವು ಆಧಾರಗಳನ್ನು
. ಮಂಡಿಸಿ ವಿರೋಧಿಗಳಿಂದ ಆಧಾರಗಳನ್ನು ಕೇಳುತ್ತದೋ" ಯಾವ ಧರ್ಮವು
ಚಿಂತನೆ-ಆಲೋಚನೆ ಮಾಡ ಬೇಕೆಂಬ ಕರೆ ಕೊಡುತ್ತದೋ ಯಾವ ಧರ್ಮವು ಕಿವಿ, ಕಣ್ಣು
29 ಸೂರಃ ಅಲ್ ಅಲಕ್-1. 30) ಸೂರಃ ಸ್ನಾದ್-39. 31) ಸೂರಃ ಆಲಿ ಇಮ್ರಾನ್-70.
32) ಸೂರಃ ಅಲ್ ಕಸಸ್-75.
16 |
ಹೃದಯಗಳನ್ನು ಸರಿಯಾಗಿ ಉಪಯೋಗಿಸದವರನ್ನು ಪ್ರಾಣಿಗಳಿಗಿಂತಲೂ ಕೀಳೆಂದು
ಸಾರುತ್ತದೋ ಯಾವ ಧರ್ಮವು ದೇವಗ್ರಂಥವನ್ನು ಬಗಲಲ್ಲಿರಿಸಿ ಅದರ ಬಗ್ಗೆ ಚಿಂತನೆ
ನಡೆಸದವರನ್ನು ಜ್ಞಾನದ ಸಂಪತ್ತು ಹೊತ್ತ ಕತ್ತೆಗೆ ಸಮಾನವೆಂದು ಪರಿಗಣಿಸುತ್ತದೋ""
ಅದೊಂದು ಅಪ್ಪಟ ಶೈಕ್ಷಣಿಕ ಆಂದೋಲನವಾಗಿದೆಯೆಂದು ಹೇಳಲು ಕಷ್ಟವಿಲ್ಲ
ಸತ್ಯ ಧರ್ಮದ ಶೈಕ್ಷಣಿಕ ಆಂದೋಲನದ ನಾಯಕರಾಗಿದ್ದ ಪ್ರವಾದಿ(ಸ) ಅವರ
ಮಟ್ಟಿಗೆ ಇಡೀ ಸಮಾಜವೇ ಕ್ಲಾಸ್‌ರೂಮ್ ಆಗಿತ್ತು. ಪ್ರವಾದೀಸ) ವೈಚಾರಿಕವಾಗಿಯೂ
ಶಿಕ್ಷಣ ನೀಡುವವರಾಗಿದ್ದರು. ನೈತಿಕ ಮತ್ತು ಸಾಮಾಜಿಕ ನೆಲೆಯಲ್ಲೂ ಸುಧಾರಣಾ
ಕರ್ತವ್ಯವನ್ನು ನಿರ್ವಹಿಸುವವರಾಗಿದ್ದರು. ರಾಜಕೀಯ ಮತ್ತು ಆರ್ಥಿಕ ರಂಗಗಳಲ್ಲೂ
ಸನ್ಮಾರ್ಗ ತೋರುವವರಾಗಿದ್ದರು. ಪ್ರತಿರೋಧಿ ವಿದ್ಯಂಸಕ ಶಕ್ತಿಗಳ ವಿರುದ್ಧ
ಯುದ್ಧರಂಗದಲ್ಲೂ ಮಾರ್ಗದರ್ಶನ ಮಾಡುವವರಾಗಿದ್ದರು. ಪ್ರವಾದಿಸು ಅವರು
ಕಾರ್ಯತಃ ಶೈಕ್ಷಣಿಕ ಆಂದೋಲನ ನಡೆಸಿ ಜ್ಞಾನಪ್ರಸಾರಕ್ಕಾಗಿ ಮಾಡಿದ ಕೆಲಸಗಳ
ಪರಿಣಾಮವಾಗಿ ಅವರ ಸಂದೇಶ ಯಾರಿಗೆಲ್ಲ ತಲಪಿತೋ ಅವರಲ್ಲಿ ಜ್ಞಾನ ಗಳಿಕೆಯ
ಅದಮ್ಯ ಬಯಕೆಯುಂಟಾಯಿತು. ಸತ್ಯಧರ್ಮವು ವಿಸ್ತರಿಸುತ್ತಾ ಹೋದಂತೆ ಎಲ್ಲ
ಬಗೆಯ ಜ್ಞಾನದ ಪ್ರಗತಿಯ ವೇಗ ಹೆಚ್ಚುತ್ತಾ ಹೋಯಿತು.
ಪ್ರವಾದಿ(ಸ) ಅವರ ಶಿಕ್ಷಕ ಸ್ಥಾನ ಮತ್ತು ಶಿಕ್ಷಣದ ಯುಕ್ತಿ
ಪವಿತ್ರ ಕುರ್‌ಆನಿನಲ್ಲಿ ಅನೇಕ ಕಡೆ ಪ್ರವಾದಿ(ಸ) ಅವರನ್ನು ಗ್ರಂಥ ಜ್ಞಾನದ ಶಿಕ್ಷಕ
ಹಾಗೂ ಸುಧಾರಕನೆಂದು ವರ್ಣಿಸಲಾಗಿದೆ.” ಪ್ರವಾದಿ(ಸ) ಅವರು ಸ್ವತಃ ತಮ್ಮನ್ನುಶಿಕ್ಷಕನೆಂದು
ಹೇಳುತ್ತಾರೆ* 'ಮಸ್ಸಿದ್ ನಬವಿ'ಯಲ್ಲಿ ಏಕಕಾಲದಲ್ಲಿ ಎರಡು ಸಭೆಗಳು ನಡೆಯುತ್ತಿದ್ದವು.
ಒಂದರಲ್ಲಿದಿಕ್ರ್, ತಸ್ಪೀಹ್ ನಡೆಯುತ್ತಿತ್ತು. ಇನ್ನೊಂದರಲ್ಲಿಧಾರ್ಮಿಕ ವಿಚಾರ ವಿನಿಮಯ
ನಡೆಯುತ್ತಿತ್ತು. ಪ್ರವಾದಿ(ಸ) ಎರಡನೆಯ ಸಭೆಗೆ ಪ್ರಾಶಸ್ತ್ಯ ನೀಡುತ್ತಾ ಆ ಸಭೆಯಲ್ಲಿ
ಹೋಗಿ ಕುಳಿತರು.” ರಾತ್ರೆಯಲ್ಲಿ ಸ್ವಲ್ಪ ಹೊತ್ತು ವಿದ್ಯಾದಾನ ಮಾಡುವುದು ಇಡೀ
ರಾತ್ರೆಯ ಆರಾಧನೆಗಿಂತಲೂ ಶ್ರೇಷ್ಠವೆಂದು ಪ್ರವಾದಿಸು ಹೇಳಿದ್ದಾರೆ.*
33) ಸೂರಃ ಅಲ್ ಅಆ್‌ರಾಫ್-79. 34) ಸೂರಃ ಅಲ್ ಜುಮುಅ-5.
35) ಸೂರಃ ಅಲ್ ಜುಮುಅ-02, ಸೂರಃ ಅಲ್ ಬಕರಃ-11, ಸೂರಃ ಆಲಿ ಇಮ್ರಾನ್-164.
36) ಮಿಶ್ಶಾತ್-ಕಿತಾಬುಲ್ ಇಲ್ಫ್; ಅಬ್ದುಲ್ಲಾ ಬಿನ್ ಉಮರ್‌ರವರಿಂದ(ರ) ಉಲ್ಲೇಖಿತ.
37) ಮಿಶ್ಶಾತ್-ಕಿತಾಬುಲ್ ಇಲ್ಫ್
38) ಮಿಶ್ಶಾತ್-ಕಿತಾಬುಲ್ ಇಲ್ಫ್: ಇಬ್ನು ಅಬ್ಬಾಸ್‌ರಿಂದ(ರ) ಉಲ್ಲೇಖಿತ.
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 17
ಪ್ರವಾಸ." ಅವರು ಶಿಕ್ಷಕನೆಂಬ ನೆಲೆಯಲ್ಲಿ ಮಾಡಿದ ಹಾಗೂ ಅನಂತರ
ಶಿಕ್ಷಕರಿಗೆ ಬಿಟ್ಟು ಹೋದ ಸ್ಪಷ್ಟವಾದ ಮಾರ್ಗಸೂಚಿಗಳನ್ನು ಮುಂದಿಟ್ಟು ಅವರ ಶಿಕ್ಷಣದ
ಯುಕ್ತಿಯನ್ನೊಬ್ಮೆ ಅವಲೋಕಿಸೋಣ. ಪ್ರವಾದಿ(ಸ) ಅವರ ಶಿಕ್ಷಣದ ಯುಕ್ತಿಯನ್ನು
ಅನುಕ್ರಮವಾಗಿ ಈ ರೀತಿ ಕ್ರೋಡೀಕರಿಸಬಹುದು.
ಪವಿತ್ರ ಕುರ್‌ಆನಿನಲ್ಲಿ ಪ್ರವಾದಿಯವರ(ಸ) ಶಿಕ್ಷಕನೆಂಬ ಹೊಣೆಗಾರಿಕೆಯನ್ನು
ಸತ್ಯಧರ್ಮವನ್ನು ತಲಪಿಸುವಷ್ಟರ ಮಟ್ಟಿಗೆ ಮಾತ್ರ ಎಂದು ಸೀಮಿತಗೊಳಿಸಲಾಗಿದೆ.3
ಅರ್ಥಾತ್' ವಿಷಯವನ್ನು ಸ್ಪಷ್ಟವಾಗಿ ತಲಪಿಸುವುದು, ಪೂರ್ಣವಾಗಿ ಮನವರಿಕೆ
ಮಾಡಿ ಕೊಡುವುದು ಪ್ರತಿಯೋರ್ವ ನೈಜ ಶಿಕ್ಷಕನ ಕರ್ತವ್ಯವಾಗಿದೆ.
2. ಪ್ರಸ್ತುತ ತತ್ವದ ಇನ್ನೊಂದು ಮುಖವೇನೆಂದರೆ ಪ್ರವಾದೀಸ) ಅವರನ್ನು
ಜನರ ಪಾಲಿಗೆ ದಂಡಾಧಿಕಾರಿ ಅಥವಾ ಬಲಾತ್ಕಾರದ ಶಿಕ್ಷಕನಾಗಿ ನೇಮಿಸಲಾಗಿಲ್ಲ
ವಂದು ಸ್ಪಷ್ಟಪಡಿಸಲಾಯಿತು.* ಅಂದರೆ ಶಿಕ್ಷಕರ ಕಲಸ ದ ಸ್ಫೂರ್ತಿ-ಪ್ರೇಮ ಮತ್ತು
ಅನುಕಂಪವಾಗಿದೆ. ಈ ಕರ್ತವ್ಯ ನಿರ್ವಹಃ ಹಣೆಯಲ್ಲಿ ಬಲಾತ್ಕಾರದ ನೀತಿಗೆ ಸ್ಥಾನವಿಲ್ಲ
3. ಪ್ರವಾದೀಸ) ಅವರಿಗೆ ನೀಡಲಾದ ಯುಕ್ತಿ ಜ್ಞಾನದ ಬೇಡಿಕೆ-ಶಿಕ್ಷಕನು
ಸೌಮ್ಯ ಸ್ವಭಾವಿಯಾಗಿರಬೇಕು; ಕಠಿಣ ಸ್ವಭಾವಿಯಾಗಿರಬಾರದು ಎಂದಾಗಿದೆ.*'
ಅನ್ಯಥಾ ವಿದ್ಯಾರ್ಥಿ ಕೂಟವು ಒಡೆದು ಹೋಗುವುದು ಅಥವಾ ಇಂದಿನ ವ್ಯವಸ್ಥೆಯಲ್ಲಿ
ಅವರನ್ನು ಕ್ಯಾಸ್‌ರೂಮ್‌ನಲ್ಲಿರಬೇಕೆಂದು ನಿರ್ಬಂಧಿಸಿದರೆ ಕನಿಷ್ಠ ವಿದ್ಯಾರ್ಥಿಗಳ
ಮನ- ಮಸ್ತಿಷ್ಠಗಳು ಹೊರಗಿರುವುದು ಖಂಡಿತ. ಪ್ರವಾದೀಸ) . ಅವರು ತಮ್ಮ
ಸಂಗಾತಿಗಳಿಗೆ ಉಪದೇಶಿಸುತ್ತಾ ಜನರಿಗೆ ಸೌಲಭ್ಯಗಳನ್ನು ಒದಗಿಸುವವರಾಗ ಬೇಕೆಂದೂ ,
ಕಷ್ಟ ಕೊಡುವವರಾಗಬಾರದೆಂದೂ ಹಾಗೂ ಅವರಿಗೆ ಸಂತೋಷ
ನೀಡುವವರಾಗಬೇಕೆಂದೂ ಮತ್ತು ದ್ವೇಷವುಳ್ಳವರಾಗಬಾರದೆಂದೂ ಹೇಳಿದ್ದಾರೆ. 42
4. ಪ್ರವಾದೀಸ) ಅವರಿಗೆ ತಮ್ಮ ಮುಂದಿರುವ ಶೈ ಶೈಕ್ಷಣಿಕ ಉದ್ದೇಶ ಸ್ಪಷ್ಟವಾಗಿತ್ತು.
ಅರ್ಥಾತ್ ಒಳಿತಿನ ಆದೇಶ. ನೀಡುವ ಹಾಗೂ ಕೆಡುಕಿನಿಂದ ತಡೆಯುವ "ಮೂಲಕ
ಮಾನವ ಕೋಟಿಯ ಮುಂದೆ ದೇವೋಪಾಸಕ ಜೀವನ ವ್ಯವಸ್ಥೆಯ ಸತ್ಯತೆಗೆ ಸಾಕ್ಷಿ
ನೀಡಬಲ್ಲಂತಹ 'ಒಂದು ಕೇಂದ್ರೀಯ ಸಂಘಟನೆಯನ್ನು. 'ಸದ್ಧಪಡಿಸುವುದಾಗಿತ್ತು.
ಎರಡನೆಯ ಉದ್ದೇಶವು ಈ ಜೀವನ ವ್ಯವಸ್ಥೆಯನ್ನು ನಡೆಸಲಕಾಗಿ ವಿಶ್ವಾಸ ಮತ್ತು.
19 ಸಾರ; ಅಲಿ ಇಮ್ರಾನ್-10. 40) ಸೂರಃ ಅಲ್. ಫಜ್‌್-22
41). ಸೂರಃ ಆಲಿ ಇಮ್ರಾನ್-159, ಸೂರಃ ಅಲ್ ಹಿಜ್ರ್- 88 42) ಪ್ರವಾದಿ ವಚನ.
18
ಚಾರಿತ್ರ್ಯ ಸಂಪನ್ನರಾದ ನಾಯಕರನ್ನು ಅಧಿಕಾರಿಗಳನ್ನು ಕಾರ್ಯಕರ್ತರನ್ನು ಹಾಗೂ
ನಾಗರಿಕರನ್ನು ಸದಪಡಸುವುದಾಗಿತ್ತು. -
5. ಶಿಕ್ಷಣದ ಬಗ್ಗೆ. ಪ್ರವಾದಿ) ಅವರ ಯುಕ್ತಿಯು ನಮಗೆ. ಶಿಕ್ಷಕ ವೃತ್ತಿಯ
ಮಿಶನರಿ ಕಲ್ಪನೆಯನ್ನು ಮೂಡಿಸುತ್ತದೆ. ಪ್ರತಿಯೋರ್ವ ಪ್ರವಾದಿಯು ತಮ್ಮ
ಅಭಿಸಂಬೋಧಿತ ಜನಾಂಗಕ್ಕೆ ಸತ್ಯದ ಶಿಕ್ಷಣ ನೀಡುತ್ತಾ ನಾನು ಈ ಸೇವೆಗಾಗಿ ನಿಮ್ಮಿಂದ
ಯಾವುದೇ ಪ್ರತಿಫಲ “ಕೇಳುತ್ತಿಲ್ಲ. ನನ್ನ ಪ್ರತಿಫಲ ಅಲ್ಲಾಹನ ಬಳಿಯಿದೆ ಎಂದು
ಸಾರಿದ್ದರು.” ಇದೇ ತತ್ವ ಪ್ರವಾದಿಯಪರದ್ಧೂಸು ಆಗಿತ್ತು. ತಾವು ಸಿದ್ಧಗೊಳಿಸಿದ್ದ
ಶಕೆ, ಅವರು ತಮ್ಮ" ವಿದ್ಯಾರ್ಥಿಗಳಿಂದಲೂ ಶಿಷ್ಯರಿಂದಲೂ ಯಾವುದೇ. ಪ್ರತಿಫಲ:
ಪಡೆಯಬಾರದೆಂದು ಆದೇಶಿಸಿದ್ದಾರೆ.
`ಈ ತತ್ವದಿಂದ ಶಿಕ್ಷಕರ ಕೆಲಸವು, ಕೆಲಸಕ್ಕೆ ತಕ್ಕ ಪ್ರತಿಫಲ ಪಡೆಯುವಂತಹ
ಬಡಗಿ, ಚಮ್ಮಾರ ಅಥವಾ ಕಮ್ಮಾರರಂತಲ್ಲವೆಂಬುದನ್ನು' ಚೆನ್ನಾಗಿ ಗ್ರಹಿಸಬಹುದು.
ಇದೊಂದು ಮಿಶನರಿ ಸ್ಫೂರ್ತಿಯ ಕೆಲಸವಾಗಿದ್ದು ಈ ತೆಲಸವನ್ನು ತಾನು ಕಲಿಸಲು
ಹೊರಟಿರುವ 'ವಿಷಯಗಳನ್ನು ಸ್ವಯಂ ಅಂಗೇಕೆರಿಸುವವರು ಹಾಗೂ ಅದರ ಮೇಲೆ
ನಂಬಿಕೆ ಇರುವವರು ಮಾತ್ರ "ಮಾಡಬಲ್ಲರು. ಇಸ್ಲಾಮೂ ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮ ಜಿ
ವಿರೋಧಿಗಳಿಗೆ ಹಾಗೂ ಕಪಟವಿಶ್ಚಾಸಿಗಳಿಗೆ ಕೆಲಸ "ಮಾಡಲು ಅವಕಾಶವೇ ಇಲ್ಲ
- ಆದುದರಿಂದಲೇ ಕಪಟವಿಶ್ಚಾಸಿಯಲ್ಲಿ ಧರ್ಮದ ತಿರುಳನ್ನು ಗ್ರಹಿಸುವ
ಶಕ್ತಿಯಿರುವುದಿಲ್ಲವೆಂದು ಪ್ರವಾದಿಸು ಹೇಳಿದ್ದಾರೆ.
6. ಶಿಕ್ಷಣದ ಈ ಮಿಶನರಿ ಭಾವನೆಯೊಂದಿಗೆ ದೊಡ್ಡ ತ್ಮ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆ
- ಗಳನ್ನು ಸ್ಥಾಪಿಸಿ ಹೆಚ್ಚಿನ ಸಂಖ್ಯೆಯ ಶಿಕ್ಷಕರಿಂದ ಪೂರ್ಣಾವಧಿ ಸೇವೆ ಪಡೆಯುವುದಾದರೆ.
ಅವರ. ಜೀವನಾಧಾರದ , ವ್ಯವಸ್ಥೆ ಮಾಡಬೇಕಾದ ಹೊಣೆಗಾರಿಕೆ ಸರಕಾರಕ್ಕೆ ಸೇರಿದ್ದು
7. ಶಿಕ್ಷಣದ ಈ ಮಿಶ ನರಿ ಕಾರ್ಯವನ್ನು ನೆರವೇರಿಸಲು ಪ್ರಸ್ತುತ ಸೂಚನೆ ಗಳಂತೆ
ಶಿಕ್ಷಕನು ತನ್ನ 'ಅಭಿಸಂಬೋಧಿತರ ಮಟ್ಟಿಗೆ ಪ್ರೇಮಮಯಿಯೂ ಅನುಕಂಪ ವುಳ್ಳವನೂ
ಮೃದು ಸ್ವಭಾವಿಯೂ ಆಗಿರುವುದರ 'ಜೊತೆಗೆ ಪ್ರವಾದಿಯವರ(ಸ) ಚರ್ಯ, ಪ್ರಕಾರ
ಅವನು ಆಕರ್ಷಕ ಮಾತುಗಾರಿಕೆಯನ್ನೂ ಅಳವಡಿಸಿಕೊಳ್ಳಬೇಕು. ವಾದ-ಪ್ರತಿವಾದದ
ಸಂದರ್ಭ ಬಂದರೆ ಜಗಳಕ್ಕಿಳಿಯದೆ ಸೌಹಾರ್ದಮಯ "ಚರ್ಚೆ, ನಡೆಸಬೇಕು."
43) ಸೂರಃ ಯಾಸೀನ್-21. 43 -ಮಿಶ್ಕಾತ್-ಕಿತಾಬುಲ್ ಇಲ್ಫ್: ಅಬೂಹುರೈರಾರಿಂದ(ರ)
ಉಲ್ಲೇಖಿತ. 45) ಸೂರಃ ಅಲ್ ಬಕರಃ-83. 46) ಸೂರಃ ಅಲ್ ಅನ್‌ಕಬೂತ್-46.
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ 139
8. ಜನರೊಂದಿಗೆ ಅವರ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಅನುಸಾರ
ವಾಗಿ ಮಾತನಾಡುವುದು ಪ್ರವಾದಿಸು ಜಸ ಬೋಧನಾ ಶೈಲಿಯ ಬೇಡಿಕೆಯಾಗಿದೆ.
ಅದರಲ್ಲಿ ಪ್ರಾಯವನ್ನೂ ಪರಿಗಣಿಸಬೇಕು. ನಗರವಾಸಿ ಗ್ರಾಮಿಣ ಎಂಬ ಅಂತರವನ್ನೂ
ಗಮನಿಸಬೇಕು: ಕಲಿಯಲು ಆರಂಭಿಸುವ ಮತ್ತು `ಕಲಿತವ ಎಂಬ ಭೇದವನ್ನೂ
ಪರಿಗಣಿಸಬೇಕು.
9. ಪ್ರವಾದಿ(ಸು ಅವರು ಶಿಕ್ಷಣ-ತರಬೇತಿಗಳಲ್ಲಿ ಕ್ರ ಕ್ರಮಬದ್ಧತೆಯ ನಜ
ವನ್ನು ಪಾಲಿಸಿದ್ದರು. ಒಂದು ಹದೀಸ್‌ನ ಪ್ರಕಾರ, ಅವರು ಗ್ರಾಮೀಣ ಜನರಿಗೆ
ಬೋಧಿಸಲು 'ರವಾನಿಸುವಾಗ ಉಪದೇಶಕ ತಂಡವನ್ನುದ್ದೇಶಿಸಿ ಈ ರೀತಿ
ಉಪದೇಶಿಸಿದರು; ಇಲ್ಲಿಂದ ಹೋದ ಕೂಡಲೇ ಧರ್ಮದ ಎಲ್ಲ ವಿಷಯಗಳನ್ನು
ಒಮ್ಮೆಲೇ -ಜನರ ಮುಂದಿಟ್ಟು ಅವರನ್ನು ಗಾಬರಿಗೊಳಿಸಬಾರದು. ಮೊದಲು ಅವರು.
ಮೂಲ ವಚನವನ್ನು ಒಪ್ಪಿಕೊಳ್ಳುವಂತೆ ಮನವೊಲಿಸಬೇಕು. ಇನ್ನು ಏಕದೇವತ್ವ ಮತ್ತು
ಪ್ರವಾದಿತ್ವವನ್ನು ಒಪ್ಪಿದರೆ ಆ ಬಳಿಕ ಅವರನ್ನು ನಮಾರು್ ಮಾಡುವಂತೆ ಹೇಳಬೇಕು.
ಅನಂತರ. ಅವರಿಗೆ. ಉಪವಾಸ ವ್ರತ, ರುಕಾತ್.. ಮತ್ತು ಹಜ್ಜ್‌ನ ಬೋಧನೆ
ನೀಡಬೇಕು,
10. ಪ್ರವಾದಿ(ಸ) ಅವರ ಚೆರ್ಯೆಯಿಂದ ದೊರಕುವ ಇನ್ನೊಂದು ಪಾಠವೆಂದರೆ
ಅವರು ಅಭಿಸಂಬೋಧಿತನ ಮನೋಭಾವವನ್ನು ್ಲಿ ಪರಿಗಣಿಸುತ್ತಿದ್ದರು. ಅಭಿಸಂಬೋಧಿತನಿಗೆ
' ಭಾರವಾಗುವ ರೀತಿಯಲ್ಲಿ ಸಂಭಾಷಣೆಯನ್ನು ನಿರಂತರ ಮುಂದುವರಿಸುತ್ತಿರಲಿಲ್ಲ
ಅಬ್ದುಲ್ಲಾ ಬಿನ್ ಮಸ್ ಊದ್(ರ) ಅವರು: ಪ್ರವಾದಿಸ) ಸಾಕಷ್ಟು ವಿರಾಮಗಳೊಂದಿಗೆ
ಮಾತನಾಡುತ್ತಿದ್ದರೆಂದು ವರ್ಣಿಸಿದ್ದಾರೆ.
ಪ್ರವಾದಿಸ) ಅವರ ಈ ವಿಧಾನದ ಇನ್ನೊಂದು ಪುರಾವೆಯನ್ನು ಹ.ಇಟ್ನು
ಬ್ಹಾಸ್(ರ)ರವರುದ್ದರಿಸ ಸದ್ದನ್ನು ಹ. ಇಕ್ರಿಮರ) ನಮಗೆ ಮುಟ್ಟಿಸಿದ್ದಾರೆ. ಅದೇನೆಂದರೆ
ii ಅವರ ವಿಧಾನವನ್ನು ಪರಿಗಣಿಸಿ ಇಬ್ನು ಅಬ್ಬಾನ್‌ರು ಇಕ್ರಿಮರಿಗೆ ಈ ರೀತಿ
ಉಪದೇಶಿಸಿದ್ದರು. - 'ಜನರಿಗೆ ವಾರಕ್ಕೊಮ್ಮೆ ಜುಮಾ[ಶುಕ್ರವಾರ) ದಿನದಂದು ಬೋಧನೆ
ನೀಡಿರಿ. ಹೆಚ್ಚು 'ಶಿಗತ್ಯವಿದೆ ಎಂದು ಕಂಡರೆ, ವಾರದಲ್ಲಿ ಎರಡು ಬಾರಿ ಬೋಧನೆ
ನೀಡಿರಿ, ಇನ್ನೂ ಹಚ್ಚಿನ ಅಗತ್ಯವಿದ್ದರೆ. ಗರಿಷ್ಠ ಮೂರು ಬಾರಿ ಬೋಧನೆ ನೀಡಿರಿ.“
47) ಮಿಶ್ಕಾತ್-ಕಿತಾಬುರ್ದುಕ್ಞಾತ್-ಇಬ್ಬು ಅಬ್ದಾಸ್‌ರಿಂದ ಉಲ್ಲೇಖಿತ
48) ಮಿಶ್ಕಾತ್-ಕಿತಾಬುಲ್ ಇಲ್ಫ್-ಅಬ್ದುಲ್ಲಾ ಬಿನ್ ಮಸ್‌ಊದ್- ಬುಖಾರಿ- ಮುಸ್ಲಿಮ್
- 49) ಮಿಶ್ಯಾಶ್ ಕಿತಾಬುಲ್ ಇಲ್ವ್ ಇಕ್ರಿಮರಿಂದ ಉಲ್ಲೇಖಿತ -ಬುಖಾರಿ,
26 |
ಈ ತತ್ವದ ಪ್ರಕಾರ ಪ್ರವಾದಿ(ಸ) ಅವರು ಯಾವಾಗಲೂ ಸಂಕ್ಷಿಪ್ತ ಬೋಧನೆ
ಗಳನ್ನು ನೀಡುತ್ತಿದ್ದರು. ಅವು ಬಾಣದಂತೆ ಜನರ ಹೃದಯಗಳಿಗೆ ನಾಟುತ್ತಿದ್ದುವು.
ಪ್ರವಾದಿ(ಸ) ಅವರ ಅತ್ಯಂತ ದೀರ್ಪ ಭಾಷಣ 'ಹಜ್ಜತುಲ್ ವಿದಾ'ದ ಭಾಷಣ
ವಾಗಿತ್ತು. ಆದರೆ ಅದು ಕೂಡಾ ಬಹಳ ಸಂಕ್ಷಿಪ್ಪವಾಗಿತ್ತು.
ಪ್ರವಾದೀಸ) ಅವರ ಸಭೆಗಳಲ್ಲಿ ಹಾಜರಾಗುತ್ತಿದ್ದವರ ಹೇಳಿಕೆಗಳಿಂದ ತಿಳಿದು
ಬರುವ ಒಂದು ವಿಶೇಷ ಸಂಗತಿಯೆಂದರೆ ಪ್ರವಾದಿ(ಸ) ಅವರ ಬೋಧನೆಗಳಲ್ಲಿ
ಕೆಲವೊಮ್ಮೆ ಒಂದು ವಿಷಯ, ಇನ್ನು ಕೆಲವೊಮ್ಮೆ ಎರಡು ವಿಷಯ ಹಾಗೂ ಮತ್ತೆ
ಕೆಲವೊಮ್ಮೆ ನಾಲ್ಕು ಅಥವಾ ಐದು ವಿಷಯಗಳಿರುತ್ತಿದ್ದುವು. ಒಮ್ಮೆಲೇ ಅನೇಕಾರು
ಉಪದೇಶಗಳನ್ನು ಅಥವಾ ಆದೇಶಗಳನ್ನು ನೀಡಿರುವ ಒಂದೇ ಒಂದು ಭಾಷಣ
ನಮಗೆ ಕಾಣಸಿಗುವುದಿಲ್ಲ
1, ಶಿಕ್ಷಣ ಬೋಧನೆಗಳಿಗಾಗಿ ವೈಚಾರಿಕ ಹಂಬಲವಿರುವಂತಹ ವಾತಾವರಣ
ವಿರಬೇಕಾದುದು ಅಗತ್ಯ. ಪ್ರವಾದಿ(ಸ) ಅವರು ಸಹಾಬಿಗಳ ಸಭೆಗೆ ಆಗಮಿಸಿದರೆ ಅಲ್ಲಿ
ಯಾವ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತಿತ್ತೋ ಅದನ್ನು ಮುರಿಯುತ್ತಿರಲಿಲ್ಲ
ಅವರೂ ಅದರಲ್ಲೇ ಪಾಲ್ಗೊಳ್ಳುತ್ತಿದ್ದರು. ಇದು ಪ್ರವಾದಿ(ಸ) ಆವರ ಶೈಲಿ.** ಶೈಕ್ಷಣಿಕ
ಮಾತುಕತೆಗಾಗಿ ಪ್ರವಾದಿಯವರು(ಸ) ಜ್ಲಾನದಾಹದ ಅವಕಾಶವನ್ನು ಕಾಯುತ್ತಿದ್ದರು. ಈ
ಅವಕಾಶವು ಯಾವುದೇ ಪ್ರಶ್ನೆ ಚರ್ಚೆ ಅಥವಾ ಸಾಮೂಹಿಕ ವಿವಾದಗಳಿಂದಾಗಿ ಸ್ವಯಂ
ಉಂಟಾಗುತ್ತಿತ್ತು. ಇಲ್ಲವಾದರೆ ಉತ್ತಮ ರೀತಿಯಿಂದ ಅಂತಹ ವಾತಾವರಣವನ್ನು
ಸೃಷ್ಟಿಸಿಕೊಳ್ಳುತ್ತಿದ್ದರು. ಆದುದರಿಂದಲೇ ಹ. ಇಬ್ನು ಅಬ್ದಾಸ್(ರ) ಅವರು ಹೀಗೆಂದಿದ್ದಾರೆ."
amie "ಕೂಟದಲ್ಲಿ ಜನರು ತಮ್ಮ ಮಾತುಕತೆಗಳಲ್ಲಿ ತಲ್ಲೀನರಾಗಿರುವಾಗ ಅವರ
ಮಾತನ್ನು ಮರಿದು ಧರ್ಮ ಪ್ರಚಾರ ಕಾರ್ಯ ನಡೆಸಬಾರದು. ಜನರು ಸ್ವತಃ ಜ್ಞಾನಕ್ಕಾಗಿ
ಅಪೇಕ್ಷಿಸುವವರೆಗೆ ಅಥವಾ ಯಾವುದಾದರೂ ಪ್ರಶ್ನೆ ಎಬ್ಬಿಸುವವರೆಗೆ ಸುಮ್ಮನಿರಬೇಕು. ಜೆ
12. ಶಿಕ್ಷಕನು ತನ್ನ ಅಭಿಸಂಬೋಧಿತರ ಗಮನವನ್ನು ತನ್ನ ಕಡೆಗೆ ಕೇಂದ್ರೀಕರಿಸದೆ
ವಿದ್ಯಾದಾನದ ಕರ್ತವ್ಯವನ್ನು ಪೂರೈಸಲಾರನು. ಪ್ರವಾದಿ(ಸ ಅವರು ಜನರ ಗಮನವನ್ನು
ತಮ್ಮೆಣೆಗೆ ಸ ಸೆಳೆಯಲಿಕ್ಕಾಗಿ ವಿವಿಧ ಪ್ರಭಾವಕಾರೀ ವಿಧಾನಗಳನ್ನು ಬಳಸುತ್ತಿದ್ದರು.
ಉದಾ: ಕೆಲವೊಮ್ಮೆ ಬೆಚ್ಚಿಬೀಳುವಂತಹ ವಿಷಯಗಳಿಂದ ಮಾತು ಆರಂಭಿಸುವುದು.
50) ಅಬ್ದುಲ್ಲಾ ಬಿನ್ ಅಮ್ರ್‌ರಿಂದ(ರ) ಉಲ್ಲೇಖಿತ.
51) ಮಿಶ್ಶ್ಯಾತ್-ಕಿತಾಬುಲ್ ಇಲ್; ಇಕ್ರಿಮರಿಂದ ಉಲ್ಲೇಖಿತ.
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 21,
'ಬಂದೇ ಬಿಟ್ಟಿತು ಅವನ ತೀರ್ಮಾನ!' ಎಂಬ ಕುರ್‌ಆನಿನ ಅಧ್ಯಾಯ ಆರಂಭಿಸುವಂತೆ."
ಇನ್ನು ಕೆಲವೊಮ್ಮೆ ಯಾವುದಾದರೂ ಪ್ರಶ್ನೆಯಿಂದ ಮಾತು ಆರಂಭಿಸುತ್ತಿದ್ದರು.
ಉದಾ; ನೀವು. ಒಂದು ವಿಷಯವನ್ನು ಕೇಳಬಯಸುತ್ತೀರಾ? ನಿಮಗೆ ಒಳಿತಿನ
ಮಾರ್ಗವನ್ನು ತೋರಿಸಿಕೊಡಲೇ? ಆವ ತಮ್ಮ ಕರ್ಮಗಳಲ್ಲಿ ಅತ್ಯಂತ ವಿಫಲರು
ಯಾರೆಂದು ತೋರಿಸಿ ಕೊಡಲೇ? ಎಂಬಿತ್ಯಾದಿ.
. ಇನ್ನೊಂದು ಉದಾಹರಣೆ- ಹಜ್ಜತುಲ್ ವಿದಾದ ಭಾಷಣದ ಆರಂಭದಲ್ಲಿ
-. ನೆರೆದಿದ್ದ ಜನರೊಡನೆ ಇದು ಯಾವ ನಗರ, ಇದು ಯಾವ ಮಾಸ ಹಾಗೂ ಇದು
pe ಬಿನಸೆ" ಎಂದು ಕೇಳಿದರು,"
ಕೆಲವೂಮ್ಮೆ ಆಶ್ಚರ್ಯಕರ ದೃಶ್ಯವನ್ನು ಮನಸ್ಸಿನ ಮುಂದೆ-ತರುತ್ತಾ ಹೇಳುತ್ತಿದ್ದರು.
ಉದಾ: ಆಕಾಶ ಒಡೆದು ಸನ. ನಕ್ಷತ್ರಗಳು ಮಂತವಾಗುವಪ ಹ
ಇತ್ಯಾದಿ. ಈ ಬಗ್ಗೆ ಹೆಚ್ಚಿನ ಉದಾಹರಣೆಗಳನ್ನು ನೀಡುವ ಅಗತ್ಯವಿಲ್ಲ R
13, ವಿಷಯವನ್ನು ಪದೇ ಪದೇ ಹೇಳುವ ಮೂಲಕವೂ ಪ್ರವಾದಿ(ಸ)
ಕಾರ್ಯ. ಸಾಧಿಸುತ್ತಿದ್ದರು. ಯಾವುದಾದರೂ. ಪ್ರಮುಖ ವಿಷಯವನ್ನು ಮನದಟ್ಟು
ಮಾಡಲು ಅದನ್ನು' ಮೂರು ಬಾರಿ ಆವರ್ತಿಸುತ್ತಿದ್ದರು. ಅದೇ ರೀತಿಯಲ್ಲಿ ಯಾರ
ಮನೆಗಾದರೂ ಹೋದರೆ ಮೂರು ಸಲ" ಅನುಮತಿ ಕೇಳುತ್ತಿದ್ದ
14. ಪ್ರವಾದಿ(ಸ) ಅವರು ಶಿಕ್ಷಣದ ದೌತ್ಯಕ್ಕಾಗಿ ವಿವಿಧ ರಂಗಗಳನ್ನೂ ವಿವಿಧ
ಮಟ್ಟಗಳನ್ನೂ ನಿಶ್ಚಯಿಸಿದ್ದರು. ಅವುಗಳ ಪೈಕಿ ಒಂದನೆಯದು ಸಾರ್ವತ್ರಿಕ: ಶಿಕ್ಷಣದ
ರಂಗವಾಗಿತ್ತು...ಎರಡನೆಯದು ಆದರ್ಶಪ್ರಾಯವಾದ ವಿದ್ವಾಂಸರನ್ನೂ ನಾಯಕರನ್ನೂ
ಸಿದ್ಧಗೊಳಿಸುವಂಥ ವಿಶೇಷ ತರಗತಿಗಳಾಗಿದ್ದುವು. ಮೂರನೆಯದು ಸ್ವೀ ಶಿಕ್ಷಣವಾಗಿತ್ತು.
ಅದಕ್ಕಾಗಿ ಪ್ರವಾದಿ(ಸ) ಅವರು ವಾರದಲ್ಲಿ ಒಂದು ದಿನ ನಿಗದಿ ಪಡಿಸಿದ್ದರು. ಹ.
ಆಯಿಶಾರನ್ನು(ರ) ಸಿದ್ಧಪಡಿಸಿ, ಧರ್ಮದ.- ಅರ್ಧ ಜ್ಞಾನವನ್ನು (ಅಂದರೆ ಕೌಟುಂಬಿಕ
ವ್ಯವಸ್ಥೆಯ ಹಾಗೂ ಸ್ವೀಯರಿಗೆ. ಸಂಬಂಧಿಸಿದ ' ವಿದ್ಯೆಯನ್ನು ಅವರಿಂದ ಪಡೆದು
ಕೊಳ್ಳಿರೆಂದು ಜನರಿಗೆ ಜೋಧಿಸಿದರು. ನಾಲ್ಕನೆಯದು ವಿಶಿಷ್ಟ ಟೂ ವಿಶಿಷ್ಟ
52) ಸೂರಃ ಸಣ್ಣ 1. 53) ಸೂರಃ ಅಲ್ ಕಹ್ಮ್-103,
54) ಬುಖಾರಿ, ಮುಸಿಮ್: ಜಾಬಿರ್ ಬಿನ್ ಅಬ್ದುಲ್ಲಾ ಮತ್ತು ಆಯಿಶಾರಿಂದ(ರ)' ಉಲ್ಲೇಖಿತ.
55) ಸೂರ ಅಲ್ ಇನ್ನಿತಾರ್- 1-4.
56) ಮಿಶಾತ್- ಕಿತಾಬುಲ್ ಇಸ್ತೀದಾನ್-ಅಬೂಸತಈದ್ ಖುದ್ರೀಯವರಿಂದ(ರ) ಉಲ್ಲೇಖಿತ.
“2 |
[|
ವ್ಯಕ್ತಿಗಳನ್ನು ಆಯ್ದು ವೈಯಕ್ತಿಕ ಗಮನಕೊಟ್ಟು ಶಿಕ್ಷಣ ತರಬೇತಿ ನೀಡುವುದಾಗಿತ್ತು.
] ಐದನೆಯದು ಹೊರಗಿನಿಂದ ಜ್ಞನಸಂಪಾದನೆಗಾಗಿ "ಬರುವ ತಂಡಗಳನ್ನು ಸಿದ್ಧಗೊಳಿಸಿ
ಗೋತ್ರಗಳ ಕಡೆಗೆ ಧರ್ಮ ಪ್ರಚಾರಕ್ಕಾಗಿ ಮರಳಿಸುವುದಾಗಿತ್ತು.
15. ಅಲ್‌ಇಲ್ಫ್ ಅಲ್ಲದೆ ಪ್ರವಾದಿ(ಸ) ಅವರು ಎಲ್ಲ ಬಗೆಯ ಶಿಕ್ಷಣ-ಕಲೆ
ಗಳನ್ನು ಕಲಿಯುವಂತೆ" ಜನರ ಗಮನ ಸೆಳೆದರು. ಓದುಬರಹವನ್ನು ಹಬ್ಬಿಸಲಿಕ್ಕಾಗಿ
ಪ್ರಯಕ್ನಿಸಿದರು. ಭಾಷಾ ಶೈಲಿಯನ್ನು ಕಾಯ್ದುಕೊಳ್ಳುವಂತೆ ಉಪದೇಶಿಸಿದರು.
ಬರವಣಿಗೆಯ ಕಲೆಯನ್ನು ಹುರಿದುಂಬಿಸಿದರು. ಸಹಾಬಿಗಳಿಗೆ ಹಿಬ್ರೂ ಭಾಷೆ ಕಲಿತು
ತೌರಾತ್‌ನ ಜ್ಞಾನ ಗಳಿಸುವಂತೆ ಹೇಳಿದರು.? ಬದ್ರ್ ರಣರಂಗದಲ್ಲಿ ಯೋಧರನ್ನು
ಅಣಿಗೊಳಿಸಿ ಯುದ್ಧಾರಂಭಕ್ಕಾಗಿ ಅವರು ಸಿದ್ಧರಾಗುವಂತೆ ನಿಯಂತ್ರಿಸಿ ಸಾಂಕೇತಿಕ"
ಪದಗಳನ್ನು (Codewords) ಕಲಿಸಿ ರಕ್ಷಣಾ. ವ್ಯವಸ್ಥೆಯ ಬಗ್ಗೆ ಅತ್ಯಂತ ಹೊಸ
ಪ್ರಯೋಗವನ್ನು ಮಾಡಿದರು. ಯುವಕರಿಗೆ ಜಹಾದ್‌ನ ಶಿಕ್ಷಣ ನೀಡಲಿಕ್ಕಾಗಿ ಓಟ
ಮತ್ತು ಬಾಣ ಎಸೆತದ ಸ್ಪರ್ಧೆಗಳೆನ್ನೇರ್ಪಡಿಸಿದರು. ಯುದ್ಧ ರಂಗದಿಂದಲೇ ಕೆಲವು
ಸಹಾಬಿಗಳ ಒಂದು ತಂಡವನ್ನು ಕೋಟೆ ಭೇದಕ ಅಸ್ಪಗಳನ್ನು ಮಾಡುವ ತರಬೇತಿ
ಪಡೆಯಲಿಕ್ಕಾಗಿ ಜರಶ್ ಎಂಬ ಸ್ಥಳಕ್ಕೆ ಕಳಿಸಿದರು.” ಕ
ಸ್ಟೀಯರಿಗೆ ಅಂದಿನ ಅಗತ್ಯಗಳಿಗನುಸಾರ ನೇಯ್ಗೆ (ಚರಕ) ಕಲಿಯುವಂತೆ
ಉಪದೇಶಿಸಿದರು. ಕುರೈಶ್ ಸ್ವ್ರೀಯರು ಮಕ್ಕಳ ಆರೈಕೆ ಮಾಡುತ್ತಿದ್ದ ರೀತಿಯನ್ನು ಕಂಡು
ಅನ್ನು ಮೆಚ್ಚಿದರು. ಈ ಯೋಗ್ಯತೆಯನ್ನು "ಅಭಿವೃದ್ಧಿ ಪಡಿಸುವ ಮಾರ್ಗವನ್ನು ಕೆಂಡು
ಹಿಡಿದರು. ತಮ್ಮ ಶಿಷ್ಯವೃಂದಕ್ಕೆ ಪೂರ್ವಾನುಮತಿ ಪಡೆಯುವ ಶಿಷ್ಟಾಚಾರ ಕಲಿಸಿದರು.
ಅವ್ಯವಸ್ಥಿತ ತಲೆಕೂದಲನ್ನು. ಕತ್ತರಿಸುವಂತೆ ಹಾಗೂ ಬಾಚಿ “ಸರಿಪಡಿಸುವಂತೆ
ಉಪದೇಶಿಸಿದರು. ಈದ್ ಹಬ್ಬಗಳಲ್ಲಿ ಧರ್ಮಸಮೃತ ಪರಿಧಿಯೊಳಗಿದ್ದು ಸಂತೋಷ
ಆಚರಣೆ ಮಾಡುವ ವಿಧಾನ ಕಲಿಸಿದರು. ವಿವಾಹಾದಿ ಸಂದರ್ಭಗಳಲ್ಲಿ ವಿವಾಹ
ಕಾರ್ಯವನ್ನು ಘೋಷಿಸುವಂತಹ ಸಂತೋಷಕರ ವಿಧಾನವನ್ನು ಕಲಿಸಿದರು. ತಮ್ಮ
ಮನೆಯಂಗಳಗಳನ್ನು ಶುಚಿಯಾಗಿಡುವಂತೆ ಉಪ ಪದೇಶಿಸಿದರು. ರಸ್ತೆಗಳಲ್ಲಿರುವ
ಮುಳ್ಳುಕಲ್ಲುಗಳನ್ನೂ 'ಹೊಲಸನ್ನೂ ಸರಿಸುವಂತೆ ತರಬೇತಿ ನೀಡಿದರು. ಜನರೊಂದಿಗೆ
ಪ್ರಸನ್ನವದನರಾಗಿ ಬೆರೆಯುವ ಶಿಷ್ಟಾಚಾರವನ್ನು ಕಲಿಸಿದರು.
ಪ್ರವಾದಿ(ಸ) ಅವರ ಈ ವಿಶಾಲ ಕಲ್ಪನೆಯು. ಪವಿತ್ರ ಕುರ್‌ಆನಿನಲ್ಲಿ
57) ಮಿಶ್ಕಾತ್-ಕಿತಾಬುಲ್ ಆದಾಬ್-ರ್ಕುದ್ ಬಿನ್ ಸಾಬಿತ್(ರ) ಉಲ್ಲೇಖಿತ (ತಿರ್ಮಿದಿ)
58) ಮಿಶ್ಶಾತ್-ಕಿತಾಬುಲ್ ಜಿಹಾದ್. 59) ಸೂರಃ ಅಲ್ ಅನ್ಸಾಲ್-60.
`` ಪ್ರವಾದಿ ಮುಷಮ್ಮದ್(ಸ): ಮಾದರಿ ಶಿಕ್ಷಕ | 23
ಕಲಿಸಲಾಗಿರುವಂತೆ, ಮುಸ್ಲಿಮರು ಪರಲೋಕದ ಒಳಿತಿನ ಜೊತೆಗೆ ಇಹಲೋಕದ
ಒಳಿತನ್ನೂ ಗಳಿಸಬೇಕು ಎಂಬ ಯುಕ್ತಿಪೂರ್ಣ ಸೂಕ್ತವನ್ನು ಅವಲಂಬಿಸಿದೆ.”
16. ಪ್ರವಾದಿ(ಸ) ಅವರು ತಮ್ಮ ಶೈಕ್ಷಣಿಕ ಯುಕ್ತಿಯಲ್ಲಿ ಮನುಷ್ಯನ ದೈಹಿಕ '
ಹಕ್ಕುಗಳಿಗೆ ತುಂಬಾ ಮಹತ್ವ ಕಲ್ಪಿಸಿದ್ದಾರೆ. ತಾಲೂತ್‌ರನ್ನು ಬನೀ ಇಸ್ರಾಈಲ್‌ರ ಸೇನಾ
ನಾಯಕತ್ವಕ್ಕೆ ನೇಮಿಸುವಾಗ ಅವರ ಆಯ್ಕೆಯ ಮಾನದಂಡವು ಅವರಿಗೆ ಜ್ಞಾನ ಮತ್ತು
ದೈಹಿಕ ಶಕ್ತಿಯನ್ನು ನೀಡಲಾಗಿದೆ ಎಂಬುದಾಗಿತ್ತು ಎಂದು ಪವಿತ್ರ ಕುರ್‌ಆನ್ ಸಾರಿದೆ.
ಇದೇ ಮಾನದಂಡದಂತೆ ಪ್ರವಾದಿ(ಸ) ಅವರು ದೈಹಿಕ ಬೇಡಿಕೆಗಳನ್ನು ಪೂರೈಸುವುದರ
ಬಗ್ಗೆ ಹೀಗೆಂದಿದ್ದಾರೆ. 'ಖಂಡಿತವಾಗಿಯೂ ನಿನ್ನ ದೇಹದ ಮೇಲೆ ನಿನಗೆ 'ಭಾದ್ಯತೆಯಿದೆ. ತ
ಈ ಸಂದರ್ಭದಲ್ಲಿ ಪ್ರವಾದಿ(ಸು ಅವರ "ಬಲಶಾಲಿ ಮೂಮಿನನು ದುರ್ಬಲ
ಮೂಮಿನನಿಗಿಂತ ಉತ್ತಮನು' ಎಂಬ ನುಡಿಯು ಗಮನಾರ್ಹ. ಶರೀರದ ಅಗತ್ಯ
ಗಳನ್ನು ಪರಿಗಣಿಸಬೇಕೆಂಬುದಕ್ಕೆ ಪ್ರವಾದಿ(ಸ) ಅವರು ಅಂದಿನ ವೈದ್ಯಶಾಸ್ಟಕ್ಕನುಸಾರವಾಗಿ
ತಮ್ಮ ಅನುಯಾಯಿಗಳಿಗೆ ನೀಡಿದ ವೈದ್ಯಕೀಯ ಬೋಧನೆಗಳೇ ಸಾಕ್ಷಿ."
17. ಪ್ರವಾದಿ(ಸ) ಅವರು ಜ್ಞಾನ ಸಂಪಾದನೆಯನ್ನು ಪ್ರೋತ್ಸಾಹಿಸಲು, ಪ್ರಶ್ನೆ
ಕೇಳುವುದಕ್ಕೆ ಬಹಳ ಪ್ರಾಮುಖ್ಯತೆ ನೀಡುತ್ತಾ, ಜ್ಞಾನವು ಒಂಡು ಪೆಟ್ಟಿಗೆಯಾಗಿದ್ದು
ಪ್ರಶ್ನೆಯು "ಅದರ ಕೀಲಕ್ಕೆಯಾಗಿಡೆಯೆಂದು ಹೇಳಿರುವರು. ಅಂದರೆ ಪ್ರಶ್ನೆಗಳನ್ನು
ಎತ್ತುವುದು ಮತ್ತು ಪ್ರಶ್ನೆಗಳನ್ನು ಸ್ವಾಗತಿಸುವುದು ಶೈಕ್ಷಣಿಕ ದೌತ್ಯದ ಮಟ್ಟಿಗೆ
ಸ
. ಪ್ರವಾದಿಸು ಅವರು ಆಧುನಿಕ ಕಾಲದ ತತ್ನಜ್ಞಾನಿಗಳಿಗಿಂತ ಬಹಳ
a ಶಿಕ್ಷಣವು ತೊಟ್ಟಿಲಿನಿಂದ ಆರಂಭಗೊಂಡು ಗೋರಿಯವರೆಗೂ ಮುಂದು
ವರಿಯಬೇಕಾಗಿದೆಯೆಂಬ ವಾಸ್ತವಿಕತೆಯನ್ನು ಸ್ಪಷ್ಟಪಡಿಸಿರುವರು.“
60) ಸೂರಃ ಅಲ್‌ಬಕರಃ-201. 61) ಸೂರಃ ಅಲ್‌ಬಕರಃ-62. 62) ರಿಯಾದುಸ್ಸಾಲಿಹೀನ್:
ಬಾಬು ಫಿಲ್ ಇಕ್ಷಿಸಾಧೀಫಿತ್ತಾಹಃ. ಅಮ್ರ್ ಬಿನ್ ಅಸ್(ರುರಿಂದ ಉಲ್ಲೇಖಿತ.
63) ರಿಯಾದುಸ್ಸಾಲಿಹೀನ್-ಬಾಬು ಫಿಲ್ ಮುಜಾಹಿದ-ಅಬೂಹುರೈರರಿಂದ(ರ) ಉಲ್ಲೇಖಿತ.
64) ಇಬ್ನು ಕಯ್ಯಿಮ್‌ರೆ ರಭಾದುಲ್ ಮಆದ್-ಬಾಬುತಿಬ್ಬ್ 3ನೇ ಭಾಗ-ದಿಕ್ರುಲ್ ಅದ್ದಿಯ್ಯಃ
ವಲ್ ಅಗ್ದಿಯ್ಯ. ಇಬ್ನು ಹಜರ್‌ರ ಅಲ್ ಅಸಾಟ ಮತ್ತು ಇಬ್ನು ಅಬೀ: ಅಸೀಬಿರವರ
ತಬಕಾತುಲ್ ಅತಿಬ್ಬಾದಲ್ಲಿ ಬಂದ ಹದೀಸ್‌ಗಳು,
65) ಹದೀಸ್: ತೊಟ್ಟಿಲಿನಿಂದ ಗೋರಿಯವರೆಗೂ ವಿದ್ಯೆ ಗಳಿಸಿರಿ.
24 |
19. ಪ್ರವಾದಿಸು ಅವರ ಶೈಕ್ಷಣಿಕ ಯುಕ್ತಿಯಿಂದ ದೊರಕುವ ಇನ್ನೊಂದು
ಪಾಠ-ಶಿಕ್ಷಣವನ್ನು ಯಾರಿಂದ ಪಡೆಯುತ್ತಿರುವಿರಿ ಎಂಬುದನ್ನು ನೋಡಿ ಕಲಿಯಿರಿ
ಎಂಬುದಾಗಿದೆ. ಅರ್ಥಾತ್ ಶಿಕ್ಷಕನು ಅರ್ಹತೆ ಮತ್ತು ಚಾರಿತ್ರ್ಯದ ಮಟ್ಟಿಗೆ
ವಿಶ್ವಾಸಾರ್ಹನೋ ಎಂಬುದನ್ನು ನೋಡಿಕೊಳ್ಳಬೇಕು.
ಪ್ರಸ್ತುತ ಹೇಳಿಕೆಯ ಆಧಾರದಲ್ಲಿ ಒಂದು ಇಸ್ಲಾರೂ ರಾಷ್ಟದ ಮೇಲೆ ಈ
ಕೆಳಗಿನ ವಿಷಯಗಳು ಕಡ್ಡಾಯವಾಗುತ್ತದೆ;
ಶಿಕ್ಷಕರನ್ನು ನೇಮಿಸುವಾಗ ಬಹಳ ಜಾಗ್ರತೆ ವಹಿಸುವುದು. ಅವರ ಸನದುಗಳನ್ನೂ
ಅವರ ವಿದ್ಯಾರ್ಹತೆಯನ್ನೂ ಮಾತ್ರ ಪರಿಶೀಲಿಸದೆ, ಚಾರಿತ್ರ್ಯದ ದೃಷ್ಟಿಯಿಂದ ಅವರ
ಕೌಟುಂಬಿಕ ಹಿನ್ನಲೆ, ಅವರ ಶೈಕ್ಷಣಿಕ ಕಾಲದ. ದಾಖಲೆಗಳನ್ನೂ ಪರಿಶೀಲಿಸುವುದು.
ನವಪೀಳಿಗೆಯ ವಿಚಾರ ಮತ್ತು ಜಾರಿತ್ರ್ಯ ನಿರ್ಮಾಣದಂತಹ ಸಂಕೀರ್ಣ
ಹೊಣೆಗಾರಿಕೆಯನ್ನು ಯಾರಿಗೆ ನೀಡಲಾಗುತ್ತದೋ ಅಂತಹವರನ್ನು ಇತರ
ಉದ್ಯೋಗಾರ್ಥಿಗಳಿಗಿಂತ ಕಠಿಣವಾಗಿ ಪರಿಶೀಲಿಸಬೇಕಾಗುತ್ತದೆ. ಶಿಕ್ಷಕನಾಗ ಬಂದವನು
ಕೇವಲ ವ್ಯಾಪಾರಿ ಮನೋವೃತ್ತಿಯವನೋ ಅಥವಾ ಅವನಲ್ಲಿ ಮಿಶನರಿ
ಸ್ಫೂರ್ತಿಯೇನಾದರೂ ಇದೆಯೇ ಎಂಬ್ಲುದನ್ನೂ ಪರಿಶೀಲಿಸಬೇಕಾಗುತ್ತದೆ. ಅಷ್ಟೇ ಅಲ್ಲ
ನೇಮಕಗೊಂಡ ಬಳಿಕವೂ ಶಿಕ್ಷಕರ ಚಾರಿತ್ರ್ಯದ ಬಗ್ಗೆ ನಿಗಾ ವಹಿಸುತ್ತಿರಬೇಕಾದುದು
ಅತ್ಯವಶ್ಯಕ. ಯಾರಾದರೂ ಈ ಕೆಲಸಕ್ಕೆ ಅನರ್ಹನೆಂದು ಕಂಡು ಬಂದರೆ ಅಂಥವನನ್ನು
ಈ ಪವಿತ್ರ ಹೊಣೆಗಾರಿಕೆಯಿಂದ ಮುಕ್ತಗೊಳಿಸಬೇಕು.
20. ಜನರಿಗೆ ಪ್ರಯೋಜನಕಾರಿಯಲ್ಲದ ವಿದ್ಯೆಯಿಂದ ಪ್ರವಾದಿ(ಸ) ಅವರು
ಅಲ್ಲಾಹನ ಅಭಯ ಯಾಚಿಸಿದ್ದಾರೆ.? ಇದಕ್ಕೆ ಎರಡರ್ಥಗಳಿವೆ. 1) ವಿದ್ಯೆ ಗಳಿಸಿದ
ನಂತರ ಓರ್ವನು ಅದನ್ನು ಉಪಯೋಗಿಸದೆ ಇದ್ದರೆ, ಅದು ವಿದ್ಯೆಯ ಪ್ರಯೋಜನ
ವನ್ನು ನಷ್ಟಗೊಳಿಸುವುದಾಗಿದೆ. 2). ಕೆಲವು ಶಿಕ್ಷಣ ಕಲೆಗಳು ಮನುಷ್ಯರಿಗೆ ಯಾವುದೇ
ಪ್ರಯೋಜನಕ್ಕೆ ಬಾರದವುಗಳಾಗಿರುತ್ತವೆ.
21. ಪ್ರವಾದಿ(ಸ) ಅವರು ಜ್ಞಾನ ಮತ್ತು ವಿಚಾರಶಕ್ತಿಗಳ ದುರ್ಬಳಕೆಯಿಂದ
ದೂರವಿರುವಂತೆ ಜನರಿಗೆ ತಾಕೀತು ಮಾಡಿದ್ದರು.” ಉದಾ: ವಿಧಿಯ ಸಮಸ್ಯೆಯ
ಬಗ್ಗೆ ಚರ್ಚಿಸುತ್ತಿದ್ದ ಸಹಾಬಿಗಳನ್ನು ಅದರಿಂದ ತಡೆದರು. ಅದರಲ್ಲಿ ಒಂದು ತಂಡವು
ಒಂದರ್ಧವನ್ನು ತೆಗೆದಿದ್ದರೆ ಇನ್ನೊಂದು ತಂಡವು ಇನ್ನೊಂದರ್ಧವನ್ನು ತೆಗೆದಿತ್ತು.
66) ಮಿಶ್ಶಾತ್-ಕಿತಾಬುಲ್ ಇಲ್ವ್ 67) ಮಿಶ್ಶಾತ್-ಬಾಬುಲ್ ಇಸ್ತಿಆರು - ರುದ್ ಬಿನ್
ಅರ್ಕಮ್(ರ) ಮತ್ತು ಅಬೂ ಹುರೈರರಿಂದ(ರ) ಉಲ್ಲೇಖಿತ. 68) ಮಿಶ್ಶಾತ್.
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 25
ಇರಡೂ ತಂಡಗಳ ಸತ್ಯಾಂಶಗಳು ಪರಸ್ಪರ ಘರ್ಷಿಸುತ್ತಿದ್ದುವು. ಈ ಹಿನ್ನೆಲೆಯಲ್ಲೇ
ಪ್ರವಾದಿ(ಸ ಅವರು ಕುರ್‌ಆನಿನ ಒಂದು ಭಾಗವನ್ನು ಇನ್ನೊಂದು ಭಾಗದೊಂದಿಗೆ
ಘರ್ಸಿಸಬೇಡಿರಿ. ಎಂದು ಉಪದೇಶಿಸಿರುವರು. ಒಡಕಿಗೆ ಕಾರಣವಾಗುವಂತಹ ಹೆಚ್ಚಿನ
ಚರ್ಚೆ-ವಾಗ್ದಾದಗಳಲ್ಲಿ ಈ ದೋಷವೇ ಎದ್ದು ಕಾಣುತ್ತದೆ.
ಇನ್ನು ಪಥಭ್ರಷ್ಠತೆಗೆ ಕಾರಣವಾಗುವಂತಹ ಚರ್ಚೆಗಳನ್ನು ಮಾಡಬಾರದೆಂದು
ಪ್ರವಾದಿ)” ಹೇಳಿದ್ದಾರೆ. ಉದಾ: ದೇವನನ್ನು ಸೃಷ್ಟಿಸಿದವರಾರು?? ಎಂಬಂತಹ ಪ್ರಶ್ನೆ
ನನಗೆ ಯಾವುದೇ ತಿಳುವಳಿಕೆಗಳನ್ನು ನೀಡಿರದಂತಹ ವಾಸ್ತವಿಕತೆಗಳ ಬಗ್ಗೆ ಪ್ರಶ್ನ
ಕೇಳುವುದರಿಂದಲೂ ಅವರು ತಡೆದಿದ್ದಾರೆ. ಯಾಕೆಂದರೆ ಅವುಗಳ ಬೆನ್ನು ಹತ್ತಿದರೆ.
ಪಥಭ್ರಷ್ಟತೆಯಲ್ಲದೆ ಇನ್ನೇನೂ ಲಭ್ಯವಾಗದು.
22. ಪ್ರವಾದಿ(ಸ) ಅವರು, ವಿದ್ಯೆಯನ್ನು ವಂಚನೆಯ ಸಾಧನವಾಗಿ ಮಾಡ
ಭಾರದೆಂದು ಉಪದೇಶಿಸಿದ್ದಾರೆ.? ಲೋಕದ ಹೆಚ್ಚಿನ ಶಿಕ್ಷಣವೇತ್ತರು ಮತ್ತು ಬುದ್ಧಿ
`ಜೀವಿಗಳು ತಮ್ಮ ವೈಚಾರಿಕತೆಯ ಮೇಲ್ಮೈಯಿಂದ ಮುಗ್ಧ ಜನರನ್ನು ವಂಚಿಸುತ್ತಾರೆ.
ಇಂದು ಅನೇಕ ಯುಕ್ತಿಪೂರ್ಣ ಮಾತುಗಳು ಹಾಗೂ ದಾರ್ಶನಿಕ ವಿಷಯಗಳನ್ನು
ನಿದ್ಯ; .ವಾದ ಮತ್ತು ಪ್ರಚಾರಗಳ ಬಲದಿಂದ" ಅನಿಷೇಧ್ಯ ವಾಸ್ತವಿಕತೆಯಾಗಿ
ಚಿತ್ರೀಕರಿಸಲಾಗುತ್ತದೆ. ಅವುಗಳನ್ನು ಅವಲೋಕಿಸಿದರೆ ಅವು ಮನಮೋಹಕ
ವಂಚನೆಯಾಗಿ ಕಾಣಬಹುದು. ಇಂದಿನ ಶಿಕ್ಷಣವು ಇಡೀ ಮಾನವಕುಲವನ್ನು ಅತಿ
. ದೊಡ್ಡ ವಂಚನೆಗೆ ಗುರಿಪಡಿಸಿದೆ. ಮಾನವನ ಜ್ಞಾನಕ್ಕೆ ನಿಲುಕದ ಪರೋಕ್ಷ ವಿ: ಷಯಗಳನ್ನು
ಕೆದಕುವುದರಿಂದ ಹಾಗೂ ಅಂತಹ ವಿಷಯಗಳ ಹುಡುಕಾಟಕ್ಕೆ ಸ ಸಂಪನ್ಮೂಲಗಳನ್ನು
ಒದಗಿಸದಂತಹ ರಂಗಗಳಿಗೆ ಕಾಲಿಡುವುದರಿಂದ ಪ್ರವಾದಿ(ಸ) ತಡೆದಿದ್ದಾರೆ. 33
. ಅಲ್ಲಾಹನ ಸೊಕ್ತಗಳನ್ನು ವಿರೋಧಿಸುವುದು ಜ್ಞಾನದ ಭಾರೀ ನಷ್ಟವೆಂದೂ”
ಆದರ 2 ಪ್ರಭಾವದಿಂದ ಕೇಳುವ, ಕಾಣುವ ಮತ್ತು ಆಲೋಚಿಸುವ ಶಕ್ತಿ ಕುಂಠಿತ
” ಗೊಳ್ಳುತ್ತದೆಂದೂ ಪ್ರವಾದಿಸು ಹೇಳಿದ್ದಾರೆ.
: 25. ಮಕ್ಕಳ ಬಗ್ಗೆ ಪ್ರವಾದಿ(ಸ) ಅವರ ಬೋಧನೆಯು ನಮಗೆ ಒಂದು ವಿಶಿಷ್ಟ
ದೃಷ್ಟಿಕೋನವನ್ನು : ನೀಡುತ್ತದೆ. `ಈ ಬಗ್ಗೆ ಅವರ ಹೇಳಿಕೆಗಳು ಹೀಗಿವೆ;
6. ಪ್ರವಾದಿ(ಸ) ಅವರು ಮಕ್ಕಳ ಮುಗ್ಧತೆಯ ಕುರಿತು, ಅವರು "ಸ್ಟೆ 'ಸ್ವರ್ಗೋದ್ಯಾನಗಳ
54; ಮ್ಯಾಕ್ ಸತಾಬುರ್ ಇಲ್ಫ್-ಮುಅವಿಯರಿಂದ(ರ) ಉಲ್ಲೇಖತ.
70) ಮಿಶ್ಶಾತ್-ಕಿತಾಬುಲ್ ಇಲ್ಫ್- ಮುಆವಿಯರಿಂದ ವರದಿ. 71) ಬನೀ ಇಸ್ರಾತಲ್-36.
3) ಮಿಶ್ಶಾತ್-ಕಿತಾಬುಲ್ ವಸ್ಥಸೆ-ಹ.ಆಯಿಶಾರಿಂದ(ರು ವರದಿ (ಮುಸ್ಲಿಮ್)
%
726
ಚ
ಹೂವುಗಳಾಗಿದ್ದಾರೆ' ಎಂದು ಬಣ್ಣಿಸಿದ್ದಾರೆ. ಅರ್ಥಾತ್ ಅವರೊಂದಿಗೆ Re
'ವಾತ್ತಲ್ಯಗಳೊಂದಿಗೆ ವ್ಯವಹರಿಸಬೇಕು. ೫
ಗ (ಮಕ್ಕಳು) - ಇಸ್ಲಾಮಿನ ಪ್ರಕೃತಿಯಲ್ಲಿ ಹುಟ್ಟಿದ್ದು ಅನಂತರ ಅವರ
ಮನೆ ಮತ್ತು ಸಮಾಜದ ವಾತಾವರಣವು ಅವರನ್ನು. ಬೇರೆಯೇ ಬಣ್ಣದಲ್ಲಿ
ಬೆಳೆಸುತ್ತದೆ?* ಎಂದಿದ್ದಾರೆ.
` ನನ್ನ ದೃಷ್ಟಿಯಲ್ಲಿ” ಇಸ್ಲಾಮಿನ -ಪ್ರಕೃತಿಯೆಂದರೆ ಪವಿತ್ರ ಕುರ್‌ಆನ್ ಎಲ್ಲ
ಮಾನವರಗಾಗಿ ಹೇಳಿರುವ ಪ್ರಕೃತಿಯೇ ಆಗಿದೆ.” ಇದರ ವಿವರಣೆಯು
ಇನ್ನೊಂದು ಹದೀಸ್‌ನಿಂದಾಗುತ್ತದೆ. ಅದರಲ್ಲಿ ಅವರು, ಪ್ರತಿಯೊಬ್ಬ
ಮಾನವನೊಳಗೆ ಒಂದು ವಾಣಿ ದೇವಚರರದ್ದೂ ಇನ್ನೊಂದು ವಾಣಿ ಶೈತಾನನದ್ದೂ
ಇರುತ್ತದೆ ಎಂದಿದ್ದಾರೆ. ಅರ್ಥಾತ್ ಅವನಲ್ಲಿ ಒಳಿತು-ಕೆಡುಕುಗಳನ್ನು ಅರಿಯುವ
ಒಲವೂ ಇರುತ್ತದೆ. ಈ ಹೇಳಿಕೆಯ ಪ್ರಕಾರ ಮಕ್ಕಳಲ್ಲಿ ಒಳಿತಿನ ವಾಣಿಯನ್ನು
ಅಥವಾ ಕೆಡುಕಿನ ವಾಣಿಯನ್ನು ಬಲಗೊಳಿಸುವ ಕಾರ್ಯವು ಮನೆ, ವಿದ್ಯಾ ಲಯ.
ಮತ್ತು ಸಮಾಜದ ಶೈಕ್ಷಣಿಕ ಚಟುವಟಿಕೆಗಳನ್ನು -ಅವಲಂಬಿಸಿದೆ.
ಮಕ್ಕಳ ತರಬೇತಿಯ ವಿಷಯದಲ್ಲಿಅವರ ಹೆತ್ತವರಿಗೆ, ತಮ್ಮ ಎಲ್ಲಮಕ್ಕಳೊಂದಿಗೂ
ಸಮಾನವಾಗಿ ವರ್ತಿಸಬೇಕೆಂದು ತಾಕೀತು ಮಾಡಿದ್ದಾರೆ. ಅನ್ಯಥಾ ಮಕ್ಕಳು ಕೆಡುವ
ರೆಂದು ಎಚ್ಚಲಿಸಿದ್ದಾರೆ.?* ಈ ತತ್ವವು ಸಾಮೂಹಿಕ ಶಿಕ್ಷಣ ವ್ಕ ವಸ್ಯೆಗೂ ಅನ್ವಯಿಸುತ್ತದೆ.
ವಿದ್ಯಾಲಯಗಳಲ್ಲಿ ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳೊಂದಿಗೂ ಸಮಾನವಾಗಿ
ವರ್ತಿಸಬೇಕು. ಎಲ್ಲರ ಹಕ್ಕುಗಳನ್ನು ಕರ್ತವ್ಯಗಳನ್ನೂ ಸಮಾನವಾಗಿ ಪೂರೈಸಬೇಕು.
ಪ್ರವಾದಿ(ಸ) ಅವರ ' ಶಿಕ್ಷಣದಿಂದ ಶಿಕ್ಷೆಯ ತತ್ವಗಳೂ ಲಭಿಸುತ್ತವೆ. ಇದರಲ್ಲಿ
ಎರಡು ಅಂಶಗಳಿವೆ. 1) ಅನಿವಾರ್ಯ ಅಗತ್ಯಕ್ಕಾಗಿ ಏಳು ವರ್ಷ ಪ್ರಾಯದ ನಂತರ
ಶಿಕ್ಷೆ ಕೊಡಬಹುದಾಗಿದೆ. 2) ಕಲೆಗಳುಂಟಾಗುವಂತಹ ಕಠಿಣ ಶಿಕ್ಷೆ ಕೊಡಬಾರದು.
ಉದಾ: ಬಲವಾದ ಏಟು, ಗುದ್ದು ಅಥವಾ ಬೆತ್ತ ಪ್ರಹಾರ. ಇನ್ನು ಶಿಕ್ಷೆ
ದೈಹಿಕವಾಗಿರಬೇಕೆಂದೇನೂ ಇಲ್ಲ, ಬೇರೆ ವಿಧದ ಶಿಕ್ಷೆಯೂ ಆಗಬಹುದು.. ಉದಾ:
73 ಮಿಶ್ಶಾತ್-ಕಿತಾಬುಲ್ ವಸ್ಥಸ ಹ. ಆಯಿಶಾರಿಂದ(ರ) ಉದ್ದರಿತ- ಮುಸ್ಲಿಮ್.
74) ಮಿಶ್ಶಾತ್-ಕಿತಾಬುಲ್ ಈಮಾನ್ ಬಿಲ್ ಕದ್ರ್-ಅಬೂಹುರೈರಾರಿಂದ(ರ) ಉದ್ಭರಿತ-
ಮುಸ್ಲಿಮ್. 15) ಸೂರಃ ಅರ್ರೂಮ್-30. *76) ಹದೀಸ್. .
77 ಮಿಶ್ಶಾತ್: ಕಿತಾಬುಸ್ಸಲಾತ್-ಅಮ್ರ್, ಬಿನ್ ಶುಐಬ್‌ರಿಂದ(ರ) ಉಲ್ಲೇಖಿತ' (ಅಬೂ
ದಾವೂದ್- ಕಿತಾಬುಲ್ ಈಮಾನ್)
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 27
ಸಹಶಯನದಿಂದ ಸ್ತ್ರೀಯರನ್ನು ದೂರಮಾಡುವಂತಹ ಆಜ್ಞೆ” ಪವಿತ್ರ-ಕುರ್‌ಆನಿನಲ್ಲಿದೆ.
ಶಿಕ್ಷಾ ತತ್ವಗಳ ಬಗ್ಗೆ ಕೆಲವು ಸ್ಪಷ್ಟೀಕರಣ ನೀಡುವುದು ಸೂಕ್ತವೆನಿಸುತ್ತದೆ.
(1) ಶಿಕ್ಷಣದ ಮೂಲಭೂತ ಬೇಡಿಕೆ ಪ್ರೀತಿ ವಾಶ್ಚಲ್ಯವಾಗಿದೆ. ಅನಿವಾರ್ಯ
ಸಂದರ್ಭಗಳಲ್ಲಿ ಮಾತ್ರ ಶಿಕ್ಷೆ ನೀಡಬಹುದು. (2) & ಶಿಕ್ಷಾ ಸಿದ್ಧಾಂತವನ್ನು
ಪ್ರವಾದಿ(ಸ) ವಿವರಿಸಿರುವ ಕಾಲವು ಇಂದಿನ ಕಲುಷಿತ ಕಾಲಕ್ಕಿಂತ ಭಿನ್ನವಾಗಿತ್ತೆಂಬುದನ್ನು.
ಮರೆಯಬಾರದು. ಸುಧಾರಿತ ಸಮಾಜದಲ್ಲಿ ಶಿಸ್ತನ್ನು ಮುರಿಯುವ ಮತ್ತು ಬಂಡೇಳುವ.
ಉದಾಹರಣೆಗಳು ಬಹಳ ಕಡಿಮೆಯಾಗಿರುತ್ತದೆ. ಅಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ
ಪರಿಣಾಮಕಾರಿಯಾಗಲು ಕಾರಣ ಶಿಕ್ಷೆ ವಿಧಿಸುವ ಕೈಗಳಿಗೆ ಇಡೀ ಸಮಾಜದ
ಸಮರ್ಥನೆಯಿರುತ್ತದೆ. ಕೆಟ್ಟ : ಸಮಾಜದಲ್ಲಿ ದುಷ್ಟ ಶಕ್ತಿಗಳು ದುಷ್ಕರ್ಮಗಳನ್ನು
ಸುಂದರವಾಗಿ ತೋರಿಸುತ್ತವೆ. ಅದರಿಂದಾಗಿ ವೈಚಾರಿಕ ಮತ್ತು ನೈತಿಕ ರಂಗದಲ್ಲಿ
ಒಂದು ಶಾಶ್ವತ ಸಂಘರ್ಷವೇರ್ಪಟ್ಟಿರುತ್ತದೆ. ಇಂತಹ ಅವಸ್ಥೆಯಲ್ಲಿ ಎರಡೇ ನೀತಿ
ಅನುಸರಿಸಲು. ಸಾಧ್ಯ.
1) ಸಾರ್ವತ್ರಿಕ ಶಿಕ್ಷಾ ನಿಯಮವನ್ನು ಜಾರಿ ಗೊಳಿಸುವುದು. ದಯಾ
ನೀತಿಯನ್ನು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅನುಸರಿಸುವುದು.
2 ಸತ್ಯ ಮತ್ತು ಒಳಿತಿನ ಶಿಕ್ಷಕರು ತಮ್ಮ ಪ್ರೀತಿ ವಾತ್ಸಲ್ಯದ ನೀತಿಯನ್ನು
ವಿಶಾಲಗೊಳಿಸುವುದು.
ಈ ಪೈಕಿ ಮೊದಲಿನ ನೀತಿಯು ಶಿಕ್ಷೆಯನ್ನು ಪ್ರಭಾವಕಾರಿಯಾಗಿ ಮಾಡಲಾರದು.
ಆದುದರಿಂದ ಎರಡನೇ ನೀತಿಯೇ ನೈಜ ಪರಿಣಾಮವನ್ನು ಬೀರಬಲ್ಲದು.
3) ಶಿಕ್ಷೆ ನೀಡುವ ವಿಷಯದಲ್ಲಿ ವೈದ್ಯರಂತಹ ನೀತಿಯನ್ನು ಅನುಸರಿಸ
ಬೇಕಾದುದು ಹಾಗೂ ಎಲ್ಲಾ ಪರಿಸ್ಥಿತಿಯಲ್ಲೂ ಸಂದರ್ಭ ಮತ್ತು ಸನ್ನಿವೇಶಗಳನ್ನು
ಗಮನಿಸಬೇಕಾದುದು ಅಗತ್ಯ.
4) ಮಕ್ಕಳ ತಲೆಯ ಮೇಲಿನಿಂದ ಶಿಕ್ಷಾದಂಡವನ್ನು ಸರಿಸದಿರಿ? ಎಂಬ
ಪ್ರವಾದಿಯವರ(ಸ) ಮಾತಿನಿಂದ ಕೆಲವರಿಗೆ ತಪ್ಪು ಗ್ರಹಿಕೆಯುಂಟಾಗಿದೆ: ಶಿಕ್ಷಾದಂಡ
ವೆಂದರೆ ಇಲ್ಲಿ ನಿಜವಾದ ದಂಡವಲ್ಲ ಅದು ಅಲಂಕಾರಿಕ ಪ್ರಯೋಗವಾಗಿದೆ. ಉದಾ:
ನಿಮ್ಮ ವಿರೋಧಿಗಳನ್ನು ಉಪಕಾರದ ಸಂಕೋಲೆಯಲ್ಲಿ ಬಿಗಿಯಿರಿ ಅಥವಾ ನಿಮ್ಮ
ವೈರಿಗಳನ್ನು ಒಳಿತಿನ ಖಡ್ಗದಿಂದ ಹೊಡೆಯಿರಿ ಎಂದು ಹೇಳುವಂತೆ! ಇಲ್ಲಿ ಸಂಕೋಲೆ
ಮತ್ತು ಖಡ್ಗಗಳ ಬಾಹ್ಯ ಅರ್ಥವನ್ನು ಯಾರಾದರೂ ತೆಗೆದರೆ ಅದು ಸರಿಯಲ್ಲ ಇಲ್ಲಿ
70 ಸೂರಃ ಅನ್ನಿಸಾ-34 79) ಹದೀಸ್..
"28 |
ಉಪಕಾರದ ಸಂಕೋಲೆ ಮತ್ತು ಒಳಿತಿನ ಖಡ್ಗವೆಂದರೆ ಉಪಕಾರ ಮತ್ತು ಒಳಿತೇ
ಆಗಿದೆ. ಅದೇ ರೀತಿಯಲ್ಲಿ ಶಿಕ್ಷಾದಂಡವೆಂದರೆ ಶಿಕ್ಷಣ ಕ್ರಮವೆಂದೇ ಆಗಿದೆ. ಶಿಷ್ಟಾಚಾರ
ಕಲಿಸುವುದು ಅಥವಾ ತರಬೇತಿ ನೀಡುವುದು ಒಂದು ಕಲೆಯೇ ಆಗಿದೆ.
24. ಪ್ರವಾದೀಸ) ಅವರ ಶಿಕ್ಷಣದ ಕೇಂದ್ರೀಯ ಪಠ್ಯ ಪವಿತ್ರ ಕುರ್‌ಆನ್
ಆಗಿತ್ತು. ಇದು ಸಕಲ ಮಾನವಕುಲದ ಮಟ್ಟಿಗೆ ಒಂದು ಗೈಡ್(ಮಾರ್ಗಸೂಚಿ) ಆಗಿದೆ.
ಶಿಕ್ಷಣದ ಇತರ ಶಾಖೆಗಳು ಇದೇ ಕೇಂದ್ರೀಯ ಪಠ್ಯದ ಸುತ್ತ ಹಣೆಯಲ್ಲಡುತ್ತದೆ.
25. ಪ್ರವಾದಿಸು' ಅವರ ಶಿಕ್ಷಣದಿಂದ ಸಿಗುವ ಇನ್ನೊಂದು ಪಾಠವೆಂದರೆ `
ಶಿಕ್ಷಕನು ವಿದ್ಯಾರ್ಥಿಗಳೊಂದಿಗೆ ಪ್ರೀತಿ-ವಾತಲ್ಯದೊಂದಿಗೆ ವರ್ತಿಸಬೇಕು." ಅದೇ
ರೀತಿಯಲ್ಲಿ ವಿದ್ಯಾರ್ಥಿಗಳೂ ಶಿಕ್ಷಕನನ್ನು ಗೌರವಿಸಬೇಕಾದುದು ಅಗತ್ಯ. ಈ ಆದೇಶ
ದಲ್ಲಿ ಶಿಕ್ಷಕನು ತನ್ನ ಯೋಗ್ಯತೆ, ಚಾರಿತ್ರ್ಯ ಮತ್ತು ಶಿಕ್ಷಣ ನೀತಿಯ ಮೂಲಕ
ವಿದ್ಯಾರ್ಥಿಗಳು ತನ್ನನ್ನು ಗೌರವಿಸುವಂತಹ ಗುಣಗಳನ್ನು ಬೆಳೆಸಬೇಕಾದುದು ಅಗತ್ಯ.
ಶಿಕ್ಷಣದ ಪ್ರಚಾರಕ್ಕಾಗಿ ಪ್ರವಾದಿ(ಸ) ಅವರ ಪ್ರಯತ್ನಗಳು
ಇನ್ನು ಪ್ರವಾದಿಣಿ ಅವರು ಶಿಕ್ಷಣದ ಪ್ರಚಾರ ಮಾದಿದ ಪ್ರಯತ್ನಗಳ
ಮೇಲೆ ಒಂದು ದೃಷ್ಟಿ ಬೀರೋಣ;
ಒಂದೆಡೆ ನಮಾರಭ್‌ನ ಸಂಸ್ಥಾಪನೆ ಹಾಗೂ ಅದರಲ್ಲಿ ಪವಿತ್ರ ಕುರ್‌ಆನಿನ
ಪಾರಾಯಣ ಮತ್ತು ಜುಮಾ ಖುತ್ತಾಗಳು ಶಿಕ್ಷಣದ ಬೆಳವಣಿಗೆಯ ಉಪಾಧಿಗಳೇ
ಆಗಿದ್ದುವು. ಇನ್ನೊಂದೆಡೆ ಈ ಉದ್ದೇಶಾರ್ಥ ಅವರು ವಿಶಿಷ್ಟ ಸಂದರ್ಭಗಳಲ್ಲಿ ವಿಶೇಷ
ಪ್ರವಚನಗಳನ್ನೂ ಸಭೆಗಳನ್ನೂ ಏರ್ಪಡಿಸುತ್ತಿದ್ದರು.
ಶಿಕ್ಷಣ ನೀಡುವವರು ಮತ್ತು ಶಿಕ್ಷಣ ಪಡೆಯುವವರೇ ನಿಮ್ಮ ಪೈಕಿ ಉತ್ತಮರು"
ಎಂಬ ಪ್ರವಾದಿ(ಸ) ವಚನವು ಶಿಕ್ಷಣ ಪ್ರಜಾರದಲ್ಲಿ ಬಹಳ ಮಹತ್ವದ್ದಾಗಿದೆ.
ಇನ್ನು ನಿಮ್ಮನ್ನೂ ನಿಮ್ಮ ಮನೆಮಂದಿಯನ್ನೂ ನರಕಾಗ್ನಿಯಿಂದ ರಕ್ಷಿರ” ಎಂಬ
ಪವಿತ್ರ ಕುರ್‌ಆನಿನ ಆದೇಶದಂತೆ ಪ್ರವಾದೀಸ) “ಅವರು, "ಹೆತ್ತವರ ಮೇಲೆ ತಮ್ಮ
ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕೆಂಬ ಹೊಣೆಗಾರಿಕೆಯನ್ನು ಹಾಕಿದರು ನೆರೆಕರೆಯವರು.
ಪರಸ್ಪರರಿಂದ ವಿದ್ಯೆ ಕಲಿತುಕೊಳ್ಳಬೇಕೆಂದು ಆದೇಶಿಸಿದರು.
ಬರವಣಿಗೆಯನ್ನು ವ್ಯಾಪ ಪಕಗೊಳಿಸಲಿಕ್ಕಾಿ ಕೈ ಕೈದಿಗಳ ಬಿಡುಗಡೆಗೆ ಪರಿಹಾರವಾಗಿ
80) ಮಿಶ್ಶಾತ್-ಕಿತಾಬ್ ಫರುಾಇಲಿಲ್ ಕುರ್‌ಆನ್. 81) ಹದೀಸ್.
82) ದಾರಮೂ-ಪ್ರಸ್ತಾವನೆ-25 ಮತ್ತು 31. 83) ಸೂರಃ ಅತ್ತಪ್ರೀಮ್-6
`. ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 2
ಅವರು ಮುಸ್ಲಿಮರಿಗೆ ಬರಹ `ಕಲಿಸಬೇಕೆಂದು . ಸಾರಿದರು.
ಮಕ್ಕಾದಲ್ಲಿದ್ದ ಅವಧಿಯಲ್ಲಿ 'ದಾರುಲ್ `ಅರ್ಕಮ್'. ಪ್ರವಾದಿ(ಸ) ಅವರಿಗೆ
ಆರಾಧನೆ ಮತ್ತು ಸಮಾಲೋಚನೆಯ ಕೇಂದ್ರವಾಗಿತ್ತು. ಅದರೊಂದಿಗೆ ಅದೊಂದು
ಪ್ರಥಮ ಶಿಕ್ಷಣ ಕೇಂದ್ರವೂ ಆಗಿತ್ತು.
ಮದೀನಾ ವಾಸದ ಕಾಲದಲ್ಲಿ ವಿಶಾಲ ಹಾಗೂ ವ್ಯವಸ್ಥಿತ ರೂಪದ ವಿದ್ಯಾಲಯವು
'ಸುಪ್ಪೆ: “ಎಂಬ ಹೆಸರಿನಿಂದ 'ಮಸ್ಥಿದುನ್ನಬವಿ' ಯಲ್ಲಿ ಸ್ಥಾಪಿತವಾಯಿತು. ಆದರಲ್ಲಿ ಹೆಚ್ಚಾಗಿ
ಹೊರಗಿನಿಂದ ಬಂದ ನವಮುಸಿಮರು ಹಾಗೂ ಕೆಲವು ಸ್ಥಳೀಯರು ಅಲ್ಲೇ ತಂಗಿ ಶಿಕ್ಷಣ
ಪಡೆಯುತ್ತಿದ್ದರು. ಡಾ। ಹಮೂದುಲ್ಲಾಹ್ ಮತ್ತು ಡಾ| ಅಹ್ಮದ್ ತಲ್ಲೀಯವರು ಇದನ್ನು
ಬೋರ್ಡಿಂಗ್ ವಿದ್ಯಾಲಯವೆಂದು ಬಣ್ಣಿಸಿದ್ದಾರೆ. ಈ ವಿದ್ಯಾಲಯದಲ್ಲಿ ಪವಿತ್ರ.
ಕುರ್‌ಆನಿನ ಅಧ್ಯಾಯಗಳನ್ನು 'ಕಂಠ ಪಾಠ ಮಾಡಿಸಲಾಗುತ್ತಿತ್ತು. "ಓದುವ ಕ್ರಮವನ್ನು
ತ ಅದರೊಂದಿಗೆ ಓದು, ಬರಹ ಮತ್ತು ಕರ್ಮಶಾಸ್ತ್ರ ಪಾಠಗಳನ್ನು
ಲಿಸಲಾಗುತ್ತಿತ್ತು.?' ಇಮಾಮ್ ಅಹ್ಮದ್ ಬಿನ್ ಹಂಬಲ್(ರ) ಅವರ ವರದಿ ಪ್ರಕಾರ
ವಿದ್ಯಾಲಯದಲ್ಲಿ ಕೆಲಿಯುವವರ ಸಂಖ್ಯೆ ಒಮ್ಮೆ ಎಪ್ಪತ್ತರವರೆಗೂ ತೆಲಪಿತ್ತು. ಇ
ಹ. ದಾವ ಬಿನ್ ಸಾಮಿತ್‌ಕವರು(ತ, ಕೆಲವು "'ಸುಪ್ಪ ವಿದ್ಯಾರ್ಥಿಗಳಿಗೆ
ಪವಿತ್ರ ಕುರ್‌ಆನ್ ಮತ್ತು ಬರವಣಿಗೆಯನ್ನು ತಾನೇ, ಕಲಿಸಿರುವುದಾಗಿ ವರದಿ
ಮಾಡಿರುತ್ತಾರೆ.” ಈ ವಿದ್ಯಾಲಯದ ಓರ್ವ” ಆದರ್ಶ ವಿದ್ಯಾರ್ಥಿ ಹ. ಅಬೂ
ಹುರೈರಾ(ರ) ಆಗಿದ್ದರು.
ಪ್ರವಾದಿ(ಸ) "ಅವರ ಶಿಕ್ಷಣ ಪ್ರಚಾರದ ಯೋಜನೆಯ ಒಂದು
ಅಂಶವೆಂದರೆ ಪ್ರತಿಯೊಂದು ಮಸೀದಿಯೂ ಶಿಕ್ಷಣ ಕೇಂದ್ರವಾಗಿತ್ತು. HR
84) ಮುಸ್ನದ್ ಇಮಾಮ್ ಅಹ್ನದ್ ಬಿನ್ ಹಂಬಲ್ ಭಾಗ-3 ಪುಟ-246 ಮತ್ತು ಅಲ್
ಕಾಮಿಲ್ ಅಲ್: ಮುಖರ್ರ್' ಭಾಗ-1 ಪುಟ-17.
85) ತಾರಿಖುಲ್ ಉಮಮ್ ಮುಲೂಕ್(ತಬರೀ) ಡಾ| ಅಹ್ಮದ್ ತಲ್ಲೀರಿಂದ ಉಲ್ಲೇಖಿತ.
86) ಇಬ್ಬುಮಾಜಃ. 4
87) ಮುಸ] ದ್ ಇಮಾಮ್ ಅಹ್ಮದ್ ಬಿನ್ ಹಂಬಲ್ ಭಾಗ-3, 'ಪುಟ-371.
88) ಮುಸ ದ್ ಇಮಾಮ್ ಅಹ್ಮದ್. ಬಿನ್ ಹಂಬಲ್ ಭಾಗ-3, ಪುಟ-371.
89) ಅಬೂದಾವೂದ್:` ಕಿತಾಬುಲ್ ಬುಯೂಲ್ ಫೀ.
90) ಮುಸ್ಲಿಮ್-ಕಿತಾಬುಲ್ ಫರಭಾಇಲ್-ಬಾಬು. ಫರಾಇಲ್ ಅಬೂಹುರೈರಃ(ರು-
ಮುಠನುದ್ದೀನ್ `ನದ್ದಿಯವರ ತಾರೀಖುಲ್ ಇಸ್ಲಾಮ್‌ನಿಂದ.
30: |
ಅವರ ಕಾಲದಲ್ಲೇ ಪಟ್ಟಣದಲ್ಲಿ: ಅಂತಹ 9 ಮಸೀದಿಗಳಿದ್ದುವು.₹" ಅಲ್ಲಿ ಆಬಾಲ
ವೃದ್ಧರಿಗೆ ಧಾರ್ಮಿಕ ಶಿಕ್ಷಣ, ಪವಿತ್ರ ಕುರ್‌ಆನ್ ಹಾಗೂ ದೈನಂದಿನ ಜೀವನಕ್ಕೆ `
ಗ ವಿಷಯಗಳನ್ನು ಕಲಿಸಲಾಗುತ್ತಿತ್ತು.
ಶಿಕ್ಷಣ ಪ್ರಚಾರಕ್ಕಾಗಿ ಪ್ರವಾದಿಸ) ಅವರು ವಿವಿಧ ಸ್ನ “ಕಡೆಗೆ 'ಕಾರೀ'
(ಕುರ್‌ಆನ್ ಪಾರಂಗತುಗಳನ್ನು ಕಳಿಸುತ್ತಿದ್ದರು. ಸುಪ್ಪೆ ವಿದ್ಯಾಲಯಗಳಲ್ಲಿ ಕಲಿತವರನ್ನು
ಕುರ್ರಾ(ಕುರ್‌ಆನ್ ಪಾರಂಗತರಿ) ಎಂಡು ಕರೆಯಲಾಗುತಿತ್ತು. >: ಆದರೆ ಅವರು.
ಇಂದು. ಕರೆಯಲ್ಪಡುವ ಅರ್ಥದ ಕಾರೀಗಳಾಗಿರಲಿಲ್ಲ ಅವರು ಕುರ್‌ಆನ್
ಪಾರಾಯಣದ ಜೊತೆಗೆ ಕುರ್‌ಆನಿನ ತಿರುಳು ಹಾಗೂ ಧರ್ಮದ ಜ್ಞಾನ ಗಳಿಸಿದ
ಪಾರಂಗತರಾಗಿದ್ದರು. ಈ ಮಂದಿ ಸೈನಿಕ ತುಕಡಿಗಳೊಂದಿಗೂ ರವಾನಿಸಲ್ಪಡುತ್ತಿದ್ದರು.
ಇದರ ಉದ್ದೇಶವು ಯೋಧರಿಗೆ ಯಾತ್ರೆಯಲ್ಲೂ ಶಿಕ್ಷಣವನ್ನು ನೀಡುವುದು ಮತ್ತು
ಇಸ್ಲಾಮ್ ಸ್ವೀಕರಿಸಿದ ಗೋತ್ರದವರಿಗೆ .ವಿದ್ಯೆ ಕಲಿಸುವುದೂ “ತ್ತು. 5
ಸುಪ್ಪ ವಿದ್ಯಾ ಲಯದ ಮೂಲಕೆ ಪಾರಂಗತರ ಸಂಖ್ಯೆ ಬೆಳೆಯತೊಡಗಿತು. ಒಮ್ಮೆ
70 ಕಾರೀಗಳ ಬಂದು ತಂಡವನ್ನು ನಜ್ಜ್‌ನ ಗ್ರಾಮಗಳಿಗೆ ಶಿಕ್ಷಣ ನೀಡಲಿಕ್ಕಾಗಿ
ರವಾನಿಸಲಾಗಿತ್ತು. ಅವರನ್ನು ಅಲ್ಲಿನ ನಿವಾಸಿಗಳೇ ಆಹ್ವಾನಿಸಿದ್ದರು. ಆದರೆ
'ಬಿಆರ್‌ಮಊನ' ಎಂಬ ಸ್ಥದಲ್ಲಿ ಆ ದುಷ್ಟರು ಈ ಅಮೂಲ್ಯ ರತ್ನಗಳನ್ನು ವಧಿಸಿದ್ದರು.?*
, ಪ್ರವಾದಿಸ) ಅವರು ಯಾವುದಾದರೂ ಪ್ರದೇಶಕ್ಕೆ ತಮ್ಮ, ಪ್ರತಿನಿಧಿಯಾಗಿ ಅಥವಾ
ರುಕಾತ್ ಸಂಗ್ರಹಕಾರರಾಗಿ ನೇಮಿಸಿ ಕಳಿಸಿದರೆ ಆ ವ್ಯಕ್ತಿಗಳು' ಅಲ್ಲಿನ ಜನರಿಗೆ ಶಿಕ್ಷಣ
ನೀಡುವ ಕೆಲಸವನ್ನೂ ಮಾಡಬೇಕಾಗುತ್ತಿತ್ತು.'ಬನೀ ಹಾರಿಸ್ ಗೋತ್ರದ ಕಡೆಗೆ ರವಾನಿಸಲ್ಪಟ್ಟ
ಹ. ಖಾಲಿದ್ ಬಿನ್ 'ಪಲೀದ್‌ರಿಗೇರು, ಅವರಿಗೆ ಶಿಕ್ಷಣ ನೀಡಬೇಕೆಂದು ಆದೇಶಿಸಿದರು. 33
ಅದೇ ರೀತಿ ಯಮನಿಗೆ ರುಖಕಾತ್ ಸಂಗ್ರಹಕ್ಕಾಗಿ ನಿಯೋಗಿಸಲ್ಪಟ್ಟ ಅಮ್ರ್ ಬಿನ್
ಹರುಮ್‌ರಿಗೆ, ಅಲ್ಲಿನ ಜನರಿಗೆ ಕುರ್‌ಆನ್ ಕಲಿಸುವಂತೆ, ಅದರ "ಮೇಲೆ ಚಿಂತನೆ
ನಡೆಸುವಂತೆ ಹಾಗೂ ತಮ್ಮ ಹಕ್ಕುಗಳೇನು, ತಮ್ಮ ಮೇಲಿರುವ ಕರ್ತವ್ಯಗೆಳೇನು
ಎಂಬಿತ್ಯಾದಿ ವಿಷಯಗಳನ್ನು ಕವಿಸುವಂತೆ ಲಿಖಿತ ಆದೇಶಗಳನ್ನು ನೀಡಿದರು. ಸ
91) * ಐನೀಶರಹ್ ಬುಖಾರಿ. ಭಾಗ-2 ಪುಟ-468. ಮುಡನುದ್ದೀನ್ ನದ್ವಿಯವರ
ತಾರೀಖುಲ್ ಇಸ್ಲಾಮ್‌ನಿಂದ. 92) `ಮುಸ್ಲಿಮ್- ಕಿತಾಬುಲ್ ಇಮಾರಃ ತ
93) ಬುಖಾರಿ: ಭಾಗ-2, ಪುಟ-45. 94) ಮುಸ್ಲಿಮ್ ಕಿತಾಬುಲ್ ಇಮಾರಃ- ಬಾಬು
ಸುಬೂತಿಲ್ ಜನ್ನತುಲ್ ಲಿಶ್ಶಹೀದಿ. 95) ಅಲ್ ವಸಾಇಕುಲ್ ಯಸಾಸ ಮಕ್ತೂಬ್- 79.
96) ಅಲ್ ವಸಾಇಕುಲ್ ಯಸಾ ಸ ಮಕ್ತೂಬ್-79.
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 31
ಸೂರಃ ತೌಬಾದ 122ನೆಯ ಸೂಕ್ತದ ಪ್ರಕಾರ ನವಮುಸ್ಲಿಮ್ ಗೋತ್ರಗಳ
ವಿವಿಧ ತಂಡಗಳು ಮದೀನಾ ಪಟ್ಟಣಕ್ಕೆ ಬಂದು ಪ್ರವಾದಿಣಿ ಮತ್ತು ಅವರ
ಸಂಗಾತಿಗಳಿಂದ ವಿದ್ಯೆ ಕಲಿತು ಮರಳಿ. ಹೋಗಿ ' ತಮ್ಮ ಗೋತ್ರಗಳ ಜನರಿಗೆ
ಕಲಿಸುತ್ತಿದ್ದರು." ಇಂತಜೆ ಒಂದು ತಂಡವು ಮಾಲಿಕ್ ಬಿನ್ 'ಹುವ್ಯಂಸ್‌ರ ನೇತೃತ್ವದಲ್ಲಿ
ಬಂದು ಇಪ್ಪತ್ತು ದಿನಗಳವರೆಗೆ ಮದೀನದಲ್ಲಿ ತಂಗಿತ್ತು.?₹
ಕೆಲವೊಂದು ಸಂದರ್ಭಗಳಲ್ಲಿ ಪ್ರವಾದಿ(ಸ) ಅವರು ವಿಶೇಷ ಶಿಕ್ಷಕರನ್ನು
ನೇಮಿಸಿದ್ದರು. ಈ ನಿಟ್ಟಿನಲ್ಲಿ ಪ್ರಪ್ರಥಮ ಉದಾಹರಣೆಯು ಹಿಜ್ರತ್‌ಗಿಂತ
ಮುಂಚಿನದ್ದಾಗಿದೆ: ಪ್ರವಾದಿ(ಸ) ಅವರು ' ಮದೀನಾದವರಿಗೆ ಧರ್ಮವನ್ನು ಹಾಗೂ
ಬರಹವನ್ನು "ಕಲಿಸಲು ಸಅದ್ ಬಿನ್ ಆಸ್ ಸ್‌ರನ್ನು(ರ) ನೇಮಿಸಿ ಕಳಿಸಿದ್ದರು. ಅವರು
ಸುಂದರ ಬರವಣಿಗೆಯವರಾಗಿದ್ದರು.? ಅವರಿಗೆ ಯುಕ್ತಿಯ ಶಿಕ್ಷಕನೆಂಬ ಬಿರುದು
ನೀಡಲಾಗಿತ್ತೆಂದು 'ಅಲ್‌ಮುಜರ್ರಿದ್'ನಲ್ಲಿ ವರದಿಯಾಗಿದೆ.
ಅದೇ ರೀತಿ ಮಕ್ಕಾ ವಿಜಯದ ನಂತರ ಹ. ಮುಆವಿಯರನ್ನು(ರ) ಮಕ್ಕಾದ
ನವಮುಸ್ಲಿಮರಿಗೆ ಕಲಿಸಲು ನಿಯೋಜಿಸಲಾಯಿತು:
ಈ ಪ್ರಯತ್ನಗಳ ಸ್ಪಷ್ಟ ಪರಿಣಾಮಗಳು ಇತಿಹಾಸದಲ್ಲಿ ನಮಗೆ ಗೋಚರಿಸುತ್ತದೆ.
ಕುರೈಶ್ ಜನಾಂಗದಲ್ಲಿ ಹಿಂದೆ ಕೇವಲ 17 ಮಂದಿಗೆ ಓದು-ಬರಹ ಬರುತ್ತಿತ್ತು.
ಆದರೆ ಆ ಜನಾಂಗದ ಓರ್ವ ವ್ಯಕ್ತಿ ಪ್ರವಾದಿಯಾದ ಬಳಿಕೆ, ದೇವವಾಣಿಯನ್ನು
ಹಾಗೂ ಪತ್ರಗಳನ್ನು ಬರೆಯುವಂತಹ ಒಂದು ವಿಶಾಲ ಕಾರ್ಯಾಲಯ.
(Secretariat) ಅವರ ಸುತ್ತು ಕಾರ್ಯವೆಸಗುತ್ತಿತ್ತು. K
ಪುರುಷರ ವಿಷಯವಂತಿರಲಿ, ಸ್ತ್ರೀಯರೂ ಓದು-ಬರಹ ಕಲಿತಿದ್ದರು. ಹಫ್ಸಾ
ಬಿಂತಿ ಉಮರ್, ಉಮ್ಮ ಕುಲ್ಲೂಮ್ ಬಿಂತಿ ಅಕಬಾ, ಆಯಿಶಾ ಬಿಂತಿ ಸಅದ್, ಕರೀಮ
` ಬಿಂತಿ ಅಕ್ಷಾದ್, ಅಶ್ಚಾ ಬಿಂತಿ ಅಬ್ದುಲ್ಲ ಅದೂಯ(ರ)- ಇವರು. ಹ. ಹಫ್ಲಾರ) ಅವರ
ಅಧ್ಯಾ ಪಕಿಯಾಗಿದ್ದರು- ಓಡು ಬರಹ ಬಲ್ಲವರಾಗಿದ್ದರು." ಹಿಜ್ರತ್‌ನ ಮೊದಲನೆಯ
97 ತಪ್ಲೀರ್ ಖಾಮೀನ್-ಮೌ। ಮುಈನುದ್ದೀನ್ ನದ್ವಿ: $8) ಬುಖಾರಿ-ಬಾಬುರ್ರಹೃತಿಲ್
ಬಹಾಇಮ್-ಮುಈನುದ್ದೀನ್ ನದ್ದಿಯವರ ತಾರೀಖುಲ್ ಇಸ್ಲಾಮ್‌ನಿಂದ.
99) -ಅಲ್ ಮುಜರ್ರದ್- (ಅಬೂದಾವೂದ್) ಪುಟ-159. 100) ಅಲ್ ಮುಜರ್ರದ್-
(ಅಬೂದಾವೂದ್) ಪುಟ-159. 101) ಬುಖಾರಿ- ಭಾಗ-1, ಪುಟ-47.
102 ಫುತೂಹುಲ್ ಬುಲ್ಮಾನ್-ಬಿಲಾದರಿ ಪುಟ-458
32 |-
ಶತಮಾನದಲ್ಲಿ 1543 ಮಂದಿ ಸ್ತ್ರೀಯರು ಹದೀಸ್ ಪಾರಂಗೆಳೆರಾಗಿದ್ದರು."*
ಕ್ರಮೇಣ ತಜ್ಞರು ಹುಟ್ಟತೊಡಗಿದರು. ಪ್ರವಾದಿ(ಸ) ಅವರು ಸೊತ್ತು ವಿತರಣೆಯ
ವಿದ್ಯೆಯಲ್ಲಿ ರುದ್ ಬಿನ್ ಸಾಬಿತ್‌ರಿಗೆ, ಕುರ್‌ಆನ್ ಪಾರಾಯಣ ಮತ್ತು ಓದುವ
ಕ್ರಮದ ವಿದ್ಯೆಯಲ್ಲಿ ಉಬೈ ಬಿನ್: ಕಲಬ್‌ರಿಗೆ, ಹರಾಮ್- ಹಲಾಲ್‌ಗಳ ವಿದ್ಯೆಯಲ್ಲಿ
ಮುಆದ್ ಬಿನ್ ಜಬಲ್‌ರಿಗೆ ಅಗ್ರಸ್ಥಾನ ನೀಡಿದ್ದರು." ಅದೇ ರೀತಿ ಒಮ್ಮೆ ಅವರು
ನಾಲ್ಕು ಮಂದಿಯಿಂದ ಕುರ್‌ಆನ್ ಕಲಿಯಿರಿ ಎಂದರು. ಅವರೆಂದರೆ ಅಬ್ದುಲ್ಲಾ ಬಿನ್
ಮಸ್‌ಊದ್, ಸಾಲಿಮ್ ಮೌಲಾ ಅಬೂ ಹುರ್ಭುಫಾ, ಉಬೈ .ಬಿನ್ ಕರಟ್ ಮತ್ತು
ಮುಆದ್ ಬಿನ್ ಜಬಲ್(ರ). 1,
ಈ ತೀವ್ರಗತಿಯ ಶೈಕ್ಷಣಿಕ. ಚಟುವಟಿಕೆಗಳು ನಿರಂತರ ತುರ್ತು ಪರಿಸ್ಥಿತಿಯ
ಕಾಲದಲ್ಲಿ ನಡೆಯುತ್ತಿದ್ದುದು ಎಷ್ಟೊಂದು ಆಶ್ಚರ್ಯಕರ! ಅದು ಮದೀನಾ ಎಂಬ
ಪುಟ್ಟ ಇಸ್ಲಾಮೊ ರಾಷ್ಟ್ರವು ಅನೇಕಾರು ವೈರಿಗಳ. ನಿರಂತರ ಆಕ್ರಮಣವನ್ನೆದುರಿಸುತ್ತಿದ್ದ
ಕಾಲವಾಗಿತ್ತು. ಆದರೆ ವಾಸ್ತವದಲ್ಲಿ ಆ ರಾಷ್ಟ್ರದ ಪ್ರೇರಕ ಶಕ್ತಿಯು ಧರ್ಮ ಶಿಕ್ಷಣವೇ
ಆಗಿತ್ತು. ಈ ಧರ್ಮವು ನೀಡುತ್ತಿದ್ದ ಸೂರ್ತಿಯಿಂದಾಗಿ ಮುಸ್ಲಿಮರು ತಮಗಿಂತ
ದೊಡ್ಡ ಸಮರ ಸಜ್ಜಿತ ಶಕ್ತಿಗಳ ಮೇಲೆ "ವಿಜಯ ಸಾಧಿಸುತ್ತಿದ್ದರು. ಈ ಶಿಕ್ಷಣದ
ಕಾರ್ಯದಲ್ಲಿ ಕೊರತೆಯುಂಟಾಗಿರುತ್ತಿದ್ದರೆ ಇತಿಹಾಸದ ಚಿತ್ರವೇ ಬೇರೆಯಾಗಿ ಬಿಡುತ್ತಿತ್ತು.
ನಾವು -ನೋಡುವ ಎರಡನೆಯ ಬೆಳವಣಿಗೆಯೆಂದರೆ 'ಅಲ್‌ಇಲ್ಫ್‌ನ ಜೊತೆ
ವಿವಿಧ ಲೌಕಿಕ ಶಿಕ್ಷಣ ಕಲೆಗಳಲ್ಲೂ ಮುಸ್ಲಿಮರು ಅತ್ಯಂತ ತೀವ್ರಗತಿಯಲ್ಲಿ ಪ್ರಗತಿ
ಸಾಧಿಸಿದರು. ಖಗೋಲ, ಭೂಗೋಳ, ವೈದ್ಯಕೀಯ, ಶಸ್ತ್ರಕ್ರಿಯೆ, ತತ್ವಜ್ಞಾನ, - ವಿಜ್ಞಾನ,
ಗಣಿತ, ಬೀಜಗಣಿತ, ಬರವಣಿಗೆ, ಚತ್ರಕರೆ: ಅಲಂದ. ನಿರ್ಮಾಣ, ಯುದ್ದಕಲೆ,
ಹಡಗುಯಾನ, ಉಕ್ಕು ನಿರ್ಮಾಣ, ಮರುಗು ಇತ್ಯಾದಿ ಶಾಸ್ತ್ರ ಸ್ವಕ್ರಲೆಗಳಲ್ಲಿ ಮುಸ್ಲಿಮರು
ಎರಡು ಶತಮಾನಗಳಲ್ಲಿ ಮಾಡಿದ _ ಸಾಧನೆಯಿಂದಾಗಿ ಯುರೋಪ್ ಖಂಡವನ್ನು
ಪ್ರಭಾವಿತಗೊಳಿಸಿದರು. _
ಮೂರನೇ ಪಾಠಬೋಧಕ ಪರಿಣಾಮ ನಮಗೆ ಕಂಡು ಸಿರ
ಪ್ರವಾದಿ(ಸು ಆರಂಭಿಸಿದ ಶೈಕ್ಷಣಿಕ ಆಂದೋಲನವು ಮುಸ್ಲಿಮರಲ್ಲಿ ವೈಚಾರಿಕ ಮತ್ತು
103) ಇಬ್ನು 'ಹಜರ್-ಅಲ್ ಅಸಾಬ-ಫೀ `ತಮೀಯಿಸ್ಸಹಾಬಃ
`` 104) ತಿರ್ಮಿದಿ-ಮನಾಕಿಬ್ ಅಶರತುಲ್ ಮುಬಶ್ಶರ- ಹ.ಅನಸ್‌ರಿಂದ(ರು ಉಲ್ಲೇಖಿತ.
105) ಬುಖಾರಿ-ಮುಸ್ಟಿಮ್-ಬಾಬು ಜಾವಿಂಉಲ್ ಮನಾಕಿಬ್ ವ ಇಲ್ಫುತ್ತವಾರೀಖ್, `
ಪ್ರವಾದಿ ಮುಹಮ್ಮದ್(ಸ): ಮಾದರಿ ಶಿಕ್ಷಕ | 33
ಸಾಂಸ್ಕೃತಿಕ ಭದ್ರತೆಯನ್ನುಂಟು ಮಾಡಿತು. ಅವರು ಗ್ರೀಸ್, ಇರಾನ್ ಮತ್ತು ಭಾರತದ
ಕೆಟ್ಟ ಶಿಕ್ಷಣಗಳನ್ನು ಕಲಿತರೂ ಅದರಿಂದಾಗಿ ಪ್ರಭಾವಿತರಾಗಲಿಲ್ಲ ಬದಲಾಗಿ ಅವರು
ಅವುಗಳ ವಿಮರ್ಶಾತ್ಮಕ ಅಧ್ಯಯನ ನಡೆಸಿ ತಮ್ಮ "ಅಲ್ ಇಲ್ಫ್‌ನ ಮಾನದಂಡಕ್ಕೆ
ಹಚ್ಚಿ ನೋಡಿದರು. ಅದಕ್ಕನುಗುಣವಾಗಿರುವುದನ್ನು ಅಂಗೀಕರಿಸಿದ ರು. ಅದಕ್ಕೆ
ಫಿರೋಧವಾಗಿರುವುದನ್ನು ಸರಿಪಡಿಸಲು ನೋಡಿದರು, ಇಲ್ಲದೆ ತಿರಸ್ಕರಿಸಿದರು. ಪ್
ವ್ರ ಶೈಕ್ಸಣಿಕವಾಗಿ ಹಿಂದುಳಿದಿದ್ದ ದ್ದೇವೆ. ಜೊತೆಗೆ ನಮ್ಮಲ್ಲಿ ಆಂತರಿಕವಾಗಿ, ವೈಚಾರಿಕ
) ಸಾಂಸ್ಕೃತಿಕ. ಭದ್ರತೆಯಿಲ್ಲ ಇಸ್ಲಾವೂ ಸಮುದಾಯವೆಂಬ ನೆಲೆಯಲ್ಲಿ ನಮ್ಮ
ಹಿಕ ಸ್ವಂತಿಕೆ ದುರ್ಬಲವಾಗಿದೆ ಆದುದರಿಂದ ಪ್ರತಿಷ್ಠಿತ ರಾಷ್ಟ್ರಗಳ ತಶ್ಪುದ್ಧಾಂತಗಳ
೫೫ಎ ಶಿಕ್ಷಣಗಳೆ ಮುಂದೆ ನಾವು ಶಾಂತಚಿತ್ತದಿಂದ ನಮ್ಮ ಸೋಲನ್ನೊಬ್ಬಿಕೊಂಡು
ಹೆಮ್ಮೆಪಡುತ್ತಿದ್ದೇವೆ.
ಕೊನೆಯ ಮಾತು
ಈ. ಚರ್ಚೆಯನ್ನು ಕೊನೆಗೊಳಿಸುತ್ತಾ, ನಾವೀಗ ಎಲ್ಲಿದ್ದೇವೆ ಎಂಬುದನ್ನು
ನೋಡೋಣ. ಒಂದು ಅನ್ಯರಾಷ್ಟವ್ರ ಹೊರಗಿನಿಂದ ಬಂದು ತನ್ನ ಅಗತ್ಯಗಳನ್ನು
ಪೂರೈಸಲಿಕ್ಕಾಗಿ ಒಂದು ವಿದ್ಯಾಭ್ಯಾಸ ಪದ್ಧತಿಯನ್ನು ನಮ್ಮ ಮೇಲೆ ಹೇರಿತು. ಅದು
ಇಸ್ಲಾಮೊ ಸಮುದಾಯದ ಸ್ವರೂಪಕ್ಕೆ ವಿರುದ್ಧವಾಗಿತ್ತು. ಪ್ರವಾದಿಯವರ(ಸ) ಶೈಕ್ಷಣಿಕ
ಯುಕ್ತಿ ಮತ್ತು ಬೋಧನೆಗಳಿಗೆ ವಿರುದ್ಧವಾಗಿತ್ತು. ಅದು ನಮ್ಮನ್ನು ಕ್ರಮೇಣ ನಮ್ಮಿಂದಲೇ
ದೂರಗೂಳಿಸಿತು. ಆ ವಿದ್ಯಾಭ್ಯಾಸ ಪದ್ಧಶಿಯ ಹೊಡೆತಕ್ಕೆ ನಮ್ಮ ಸ್ಪಂತಿಕೆ` ಬಲಿಯಾಯಿತು.
ನಾವು ಸ್ವಾತಂತ್ರ್ಯ ಗಳಿಸಿ ವರ್ಷಗಳೇ ಸಂದರೂ ಆ “ಸಣ ಪದ್ಧಕಿಯ ಕಪಿ
ಮುಷ್ಟಿಯಿಂದ ನಮಗೆ ಹೊರಬರಲು ಸಾಧ್ಯವಾಗುತ್ತಿಲ್ಲ
ಈ ಹೇರಲ್ಪಟ್ಟ ಶಿಕ್ಷಣ ಪದ್ಧತಿಯ ಪಾಠ ಪದ್ಧತಿಯಲ್ಲಿ ಕೆಲವು ಉತ್ತಮ
ವಿಷಯಗಳನ್ನು ಇಸ್ಪಾಮಿನಿಂದಲೂ ಜೋಡಿಸಬೇಕೆಂಬುದು ಶಿಕ್ಷಣ ತಜ್ಞರ ವಲಯಗಳು
ಈವರೆಗೂ ಯೋಚಿಸುತ್ತಾ ಬಂದಿರುವ ವಿಚಾರ. ಇದು ನೀವೊಂದು ಟ್ಯಾಂಕಿಗೆ ಸಕ್ಕರೆ
ತಯಾರಿಸುವ ಯಂತ್ರದ ಬಿಡಿ ಭಾಗಗಳನ್ನು ಜೋಡಿಸಿ ಇನ್ನು ಈ ಟ್ಯಾಂಕ್ ಸಕ್ಕರೆ
ತಯಾರಿಸುವುದು ಎಂದು ಭಾವಿಸಿ ದಂತಾಗಿದೆ.
ಒಂದು ವಿಶಿಷ್ಟ ಸಾಂಸ್ಕೃತಿಕ ವಾಹಕ ಸಮುದಾಯ ಮತ್ತು ಮಾನವ ಕಲ್ಯಾಣಕ್ಕಾಗಿ
ಎದ್ದು ನಿಲ್ಲುವ ಆಂದೋಲನದ ವಾಹಕ ಜನಾಂಗವು ತನ್ನ ಅಗತ್ಯದ ಸಂಪೂರ್ಣ ಶಿಕ್ಷಣ
ಪದ್ಧತಿಯನ್ನು ತಾನೇ ಸಿದ್ಧಪಡಿಸುತ್ತದೆ. ಅದು ತನ್ನ ಶೈಕ್ಷಣಿಕ ಸಿದ್ಧಾಂತಗಳ ಅಸ್ತಿವಾರವನ್ನು
34 |
ಸತ್ಯವಿಶ್ವಾಸ ಮತ್ತು ದೃಢನಂಬಿಕೆಗಳ ಮೇಲೆ ಕಟ್ಟುತ್ತದೆ. ಅದು ತನ್ನ ಪಾಠ ಪದ್ಧತಿಯ
ಪ್ರತಿಯೊಂದು ಅಂಶದಲ್ಲೂ ತನ್ನ ಸಾಮೂಹಿಕ ಧ್ವೇಯದ ಸ್ಫೂರ್ತಿಯನ್ನು ತುಂಬುತ್ತದೆ.
ಅದು ತನ್ನ ಶಿಕ್ಷಣದ ಯುಕ್ತಿಯ ಮೇಲೆ ಶಿಕ್ಷಣ ಪದ್ಧತಿಯ ಅಸ್ತಿವಾರವನ್ನಡುತ್ತದೆ.
ಅದರ ಶಿಕ್ಷಣದ. ಉದ್ದೇಶ ವಿಶಿಷ್ಟ ಜೀವನ. ವ್ಯವಸ್ಥೆಯನ್ನು ನಡೆಸಲು ಹಾಗೂ
ಮಾನನೀಯ ಆಂದೋಲನವನ್ನು ಮುನ್ನಡೆಸಲು ಅಗತ್ಯ ವಾಗಿರುವಂತಹ ಮನುಷ್ಯರನ್ನು
ತಯಾರಿಸುವುದಾಗಿದೆ.
ಕೊನೆಯಲ್ಲಿ ನಾನು, ಪ್ರವಾದಿ ಅವರ ಶೈಕ್ಟಣಿಕ ಸಾಧನೆಗಳ ಬೆಳಕಿನಲ್ಲಿ ಇಸ್ಲಾಮ
ಸಮಾಜಕ್ಕೆ ಒಂದು ಆರೋಗ್ಯವಂತ ಶಿಕ್ಷಣ ವಡ್ಗತಿಯನ್ನು ಆವಿಷ್ಯರಿಸುವಂತೆ ಹಾಗೂ
ನಮ್ಮ ಸಂತಾನಗಳನ್ನು ವೈಚಾರಿಕ ಮತ್ತು ನೈತಿಕ ಮಟ್ಟದಲ್ಲಿ ಕೆಡಿಸಿ ಬಿಟ್ಟಿರುವಂತಹ,
ಈಮಾನ್‌ಗೆ ವಿರುದ್ಧವಾದ. ಮತ್ತು ಚಾರಿತ್ಯಹೀನವಾದ ಆಧುನಿಕ ಶಿಕ್ಷಣ ಪದ್ಧತಿಯಿಂದ
ರಕ್ಷಿಸುವಂತೆ ದೇಶದ ಪ್ರಜ್ಞಾವಂತ ಶಿಕ್ಷಕರು ಮತ್ತು ಶಿಕ್ಷಣ ತಜ್ಞರ ಗಮನವನ್ನು
ಸೆಳೆಯಬಯಸುತ್ತೇನೆ.